- ಕುಂದಾಪುರ: ದಿನಾಂಕ: 10-08-2024(ಹಾಯ್ ಉಡುಪಿ ನ್ಯೂಸ್) ಕೊರ್ಗಿ ಗ್ರಾಮದ ದೇವಸ್ಥಾನ ವೊಂದರ ಬಳಿ ತಡ ರಾತ್ರಿ ಅವಿತುಕೊಂಡಿದ್ದ ವ್ಯಕ್ತಿ ಯೋರ್ವನನ್ನು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಭೀಮಾಶಂಕರ ಸಿನ್ನೂರ ಅವರು ಬಂಧಿಸಿದ್ದಾರೆ.
- ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಯವರಾದ ಭೀಮಾ ಶಂಕರ ಸಿನ್ನೂರ ಅವರು ಸಿಬ್ಬಂದಿಯವರೊಂದಿಗೆ ದಿನಾಂಕ :10-08-2024 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಗ್ಗಿನ ಜಾವ 04:30 ಗಂಟೆಗೆ ಕೊರ್ಗಿ ಗ್ರಾಮದ ಕೊರ್ಗಿ-ನೂಜಿ ಮುಖ್ಯ ರಸ್ತೆ ವಿನಾಯಕ ದೇವಸ್ಥಾನದ ಬಳಿ ಓರ್ವ ವ್ಯಕ್ತಿ ಮರೆ ಮಾಚಿಕೊಂಡು ಕತ್ತಲಿನಲ್ಲಿ ಕುಳಿತು ಅಡಗಿಕೊಳ್ಳಲು ಪ್ರಯತ್ನಿಸುತ್ತಿರುವುದು ಪೊಲೀಸರಿಗೆ ಕಂಡು ಬಂದಿದೆ ಎನ್ನಲಾಗಿದೆ .
- ಪೊಲೀಸರು ಆತನ ಬಳಿಗೆ ಹೋಗಲು ಜೀಪನ್ನು ಆತನ ಕಡೆಗೆ ತಿರುಗಿಸಿದಾಗ ಆತನು ಓಡಿ ಹೋಗಲು ಪ್ರಯತ್ನಿಸಿದ್ದು ನಂತರ ಪೊಲೀಸ್ ಸಿಬ್ಬಂದಿಯವರ ಸಹಾಯದಿಂದ ಆತನನ್ನು ಸುತ್ತುವರಿದು ಹಿಡಿದು ಆತನಲ್ಲಿ ಹೆಸರು ವಿಳಾಸದ ಬಗ್ಗೆ ಹಾಗೂ ತಡರಾತ್ರಿ ಕತ್ತಲಿನಲ್ಲಿ ದೇವಸ್ಥಾನದ ಬಳಿ ಇರುವಿಕೆಯ ಬಗ್ಗೆ ಪೊಲೀಸರು ವಿಚಾರಿಸಿದಾಗ ಆತನು ಮೊದಲಿಗೆ ತನ್ನ ವಿಳಾಸದ ಬಗ್ಗೆ ತಿಳಿಸಲು ತಡವರಿಸಿದ್ದು, ನಂತರ ಕೂಲಂಕುಷವಾಗಿ ವಿಚಾರಿಸಿದಾಗ ತನ್ನ ಹೆಸರು ಹುಸೇನ್‌ಬಾಷಾ ಮುಲ್ಲಾ (39) ಸಿಂದಗಿ ತಾಲೂಕು ವಿಜಯಪುರ ಜಿಲ್ಲೆ. ಎಂದು ತಿಳಿಸಿರುತ್ತಾನೆ ಎನ್ನಲಾಗಿದೆ.
- ಆತನು ಕೊರ್ಗಿ-ನೂಜಿ ಮುಖ್ಯ ರಸ್ತೆ ವಿನಾಯಕ ದೇವಸ್ಥಾನದ ಬಳಿ ಯಾವುದೋ ಕ್ರತ್ಯ ನಡೆಸುವ ಉದ್ದೇಶ ಹೊಂದಿರುವುದು ಕಂಡು ಬಂದಿರುವುದರಿಂದ ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
- ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 96K P Act ನಂತೆ ಪ್ರಕರಣ ದಾಖಲಾಗಿದೆ.