ಹಿರಿಯಡ್ಕ: ದಿನಾಂಕ :10-08-2024(ಹಾಯ್ ಉಡುಪಿ ನ್ಯೂಸ್) ಹಿರಿಯಡ್ಕ ಜಂಕ್ಷನ್ ನಲ್ಲಿ ಸಾರ್ವಜನಿಕ ಶಾಂತಿ ಭಂಗನಡೆಸಿದ ಬಸ್ ಸಿಬ್ಬಂದಿಗಳನ್ನು ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಂಜುನಾಥ ಮರಬದ ಅವರು ಬಂಧಿಸಿದ್ದಾರೆ.
ಹಿರಿಯಡ್ಕ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಮಂಜುನಾಥ ಮರಬದ ಅವರು ದಿನಾಂಕ: 09-08-2024 ರಂದು ಸಂಜೆ ರೌಂಡ್ಸ್ ಕರ್ತವ್ಯದಲ್ಲಿರುವಾಗ, ಹಿರಿಯಡ್ಕ ಜಂಕ್ಷನ್ ಬಳಿ ಗಲಾಟೆ ಆಗುತ್ತಿರುವ ಬಗ್ಗೆ ಸಾರ್ವಜನಿಕ ರಿಂದ ಮಾಹಿತಿ ಬಂದ ಮೇರೆಗೆ ಕೂಡಲೇ ಸ್ಥಳಕ್ಕೆ ತೆರಳಿದಾಗ ಅಲ್ಲಿ ನೀಲಿ ಬಣ್ಣದ ಸಾಚಿ ಎಂಬ ಹೆಸರಿನ ಬಸ್ ಅನ್ನು ರಾಷ್ಟ್ರೀಯ ಹೆದ್ದಾರಿಗೆ ಮಧ್ಯದಲ್ಲಿ ನಿಲ್ಲಿಸಿ 3-4 ಜನ ವ್ಯಕ್ತಿಗಳು ಬಸ್ಸಿನ ಸಮಯದ ವಿಚಾರದಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಪೊಲೀಸರು ಗಲಾಟೆ ಮಾಡಿಕೊಳ್ಳುತ್ತಿದ್ದ ವ್ಯಕ್ತಿಗಳ ಹೆಸರು ವಿಳಾಸ ವಿಚಾರಣೆ ನಡೆಸಿದಾಗ 1) ಶಶಿಕಾಂತ್ (25), 2) ರಾಜೇಶ್ (35), 3) ಉಮೇಶ್ (54), 4) ಪ್ರಶಾಂತ್ (40) ಎಂಬವರು ಸೇರಿ ಬಸ್ಸಿನ ಸಮಯದ ವಿಚಾರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡು ಬಸ್ಸನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ ಸಾರ್ವಜನಿಕರ ಶಾಂತಿಗೆ ಭಂಗವನ್ನುಂಟು ಮಾಡಿದ್ದಾರೆ ಎಂದು ದೂರಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ: 194 BNS ರಂತೆ ಪ್ರಕರಣ ದಾಖಲಾಗಿದೆ.