ಉಡುಪಿ: ದಿನಾಂಕ:04-07-2024(ಹಾಯ್ ಉಡುಪಿ ನ್ಯೂಸ್) ಬಸ್ ನಿಲ್ದಾಣದಲ್ಲಿ ಬದಲಿ ಬಸ್ ನಿಲ್ಲಿಸಿರುವ ಬಗ್ಗೆ ಕಂಡಕ್ಟರ್ ಹಾಗೂ ಮಾಲೀಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಿ ಅಬ್ದುಲ್ ರಜಾಕ್ ,ಉಡುಪಿ ಎಂಬವರು ಡೀಸೆಂಟ್ ಬಸ್ಸಿನ ಮಾಲಕರಾಗಿದ್ದು ಟಿ.ಅಬ್ದುಲ್ ರಜಾಕ್ ರವರ ಬಸ್ಸು ಅಫಘಾತಕ್ಕೀಡಾಗಿರುವುದರಿಂದ ದಿನಾಂಕ 03/07/2024 ರಂದು ಬೇರೆ ಬದಲಿ ಬಸ್ಸನ್ನು ಉಡುಪಿ ಬಸ್ ಸ್ಟ್ಯಾಂಡಿನಲ್ಲಿ ಕ್ಯೂ ನಲ್ಲಿ ನಿಲ್ಲಿಸಿದ್ದು ಟಿ.ಅಬ್ದುಲ್ ರಜಾಕ್ ರವರ ಬಸ್ಸಿನ ಹಿಂದೆ ಎಕೆಎಮ್‌ಎಸ್ ಎಂಬ ಬಸ್ಸನ್ನು ನಿಲ್ಲಿಸಿದ್ದು ಎಕೆಎಮ್ ಎಸ್ ಬಸ್ಸಿನ ಕಂಡಕ್ಟರ್ ಸಾರಾನ್ ಎಂಬವನು ಟಿ.ಅಬ್ದುಲ್ ರಜಾಕ್ ರ ಬಸ್ಸನ್ನು ಅಡ್ಡ ಗಟ್ಟಿ ಬಸ್ಸನ್ನು ಬಿಟ್ಟರೆ ಬಸ್ ಅನ್ನು ಹುಡಿ ಮಾಡುತ್ತೇನೆ ಎಂದು ಟಿ. ಅಬ್ದುಲ್ ರಜಾಕ್ ರ ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಗೆ ಬೆದರಿಕೆ ಹಾಕಿರುತ್ತಾನೆ ಎಂದು ದೂರಿದ್ದಾರೆ, ಅಲ್ಲದೆ ಸೈಫುದ್ದಿನ್ ಎಂಬಾತನು ಟಿ.ಅಬ್ದುಲ್ ರಜಾಕ್ ರಿಗೆ ಹಾಗೂ ಅವರ ಮಗನಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಿದ್ದಾರೆ.
ಟಿ ಅಬ್ದುಲ್ ರಜಾಕ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 126, 351(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.