Spread the love

ಮಣಿಪಾಲ: ದಿನಾಂಕ :04-07-2024 (ಹಾಯ್ ಉಡುಪಿ ನ್ಯೂಸ್) ಪೊಲೀಸರಿಗೆ ನೀಡಿರುವ ದೂರನ್ನು ಹಿಂಪಡೆಯುವಂತೆ ದೂರುದಾರರಿಗೆ ಕೊಲೆ ಬೆದರಿಕೆ ನೀಡಿರುವ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ ಕಾಯಿನ್‌ ಸರ್ಕಲ್‌ ಬಳಿ ನಿವಾಸಿ ಸೈಫುದ್ದೀನ್ (50) ಎಂಬವರ ಅಣ್ಣನ ಮಗನನ್ನು  ದಿನಾಂಕ:20-06-2024 ರಂದು ಶಾರೀಕ್ ಎಂಬವನು ಕಿಡ್ನಾಪ್‌ ಮಾಡಿ ಬೆದರಿಕೆ ನೀಡಿದ್ದಾನೆ ಎಂದು ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಸೈಫುದ್ದೀನ್ ರವರ ಅಣ್ಣನ ಮಗ ದೂರನ್ನು ದಾಖಲಿಸಿದ್ದಾನೆ ಎನ್ನಲಾಗಿದೆ.

ನಂತರ ಅದೇ ದಿನ ಮಧ್ಯಾಹ್ನ ಸುಮಾರು 01:30 ಗಂಟೆಯಿಂದ ರಾತ್ರಿ 09:30 ಗಂಟೆಯವರೆಗೆ ಮೊಬೈಲ್‌ ನಿಂದ ಸೈಫುದ್ದೀನ್ ರ ಮೊಬೈಲ್‌ ನಂಬ್ರಕ್ಕೆ ಸುಮಾರು 10 ಬಾರಿ ಕರೆ ಬಂದಿದ್ದು ಸೈಫುದ್ದೀನ್ ರವರು ರಾತ್ರಿ 09:30 ಗಂಟೆ ಸುಮಾರಿಗೆ ಕರೆಯನ್ನು ಸ್ವೀಕರಿಸಿದಾಗ ಆ ಮೊಬೈಲ್ ಕರೆಯು ಶಾರೀಕ್‌ ನ ಸಹೋದರ ಶಫಿಕ್‌ ಎಂಬುವವನದಾಗಿದ್ದು, ಶಫಿಕ್‌ ನು ಸೈಫುದ್ದೀನ್ ರವರಲ್ಲಿ ಶಾರೀಕ್ ನ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ನೀಡಿರುವ  ದೂರನ್ನು ಹಿಂತೆಗೆಯಬೇಕೆಂದು ಬೆದರಿಸಿದ್ದು, ಒಂದು ವೇಳೆ ದೂರನ್ನು ಹಿಂತೆಗೆಯದೇ ಇದ್ದಲ್ಲಿ ಆತನ ಸಹಚರರಿಂದ ಸೈಫುದ್ದೀನ್ ರವರ ಕೊಲೆ ಮಾಡಿಸುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ದೂರಿದ್ದಾರೆ.

ಅಷ್ಟೇ ಅಲ್ಲದೇ ಈಗಾಗಲೇ ಸೈಫುದ್ದೀನ್ ರವರ ಮೇಲೆ ಹಲವರಿಗೆ ದ್ವೇಷ ಇರುವದರಿಂದ ಸೈಫುದ್ದೀನ್ ರವರ ಕೊಲೆ ಮಾಡಿಸಿದರೂ ಯಾರಿಗೂ ಆತನ ಮೇಲೆ ಸಂಶಯ ಬರುವುದಿಲ್ಲವೆಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ: 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!