Spread the love

ಉಡುಪಿ:  ದಿನಾಂಕ: 04-07-2024 (ಹಾಯ್ ಉಡುಪಿ ನ್ಯೂಸ್) ನಗರದಲ್ಲಿ ಕರ್ಕಶ ಹಾರ್ನ್ ಬಳಸಿ ಶಬ್ದ ಮಾಡುತ್ತಿದ್ದ ಬಸ್ಸನ್ನು ಉಡುಪಿ ಸಂಚಾರ ಪೊಲೀಸ್‌ ಠಾಣೆಯ ಉಪನಿರೀಕ್ಷಕರಾದ ಸುದರ್ಶನ್ ದೊಡ್ಡಮನಿ ಅವರು ವಶಕ್ಕೆ ಪಡೆದಿದ್ದಾರೆ.

ಉಡುಪಿ ಸಂಚಾರ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುದರ್ಶನ್ ದೊಡ್ಡಮನಿ ಅವರು  ದಿನಾಂಕ:28/06/2024 ರಂದು ಬೆಳಿಗ್ಗೆ ಜೋಡುಕಟ್ಟೆಯ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಭಾರತಿ ಎಂಬ ಹೆಸರಿನ KA 20 AC 1287 ನೇ ಬಸ್ಸಿನ ಚಾಲಕ ಭೋಜರಾಜ್‌ ಎಂಬಾತನು  ಉಡುಪಿ ತಾಲ್ಲೂಕು 76 ಬಡಗುಬೆಟ್ಟು ಗ್ರಾಮದ ಕಿನ್ನಿಮುಲ್ಕಿ ಕಡೆಯಿಂದ ಜೋಡುಕಟ್ಟೆ ಕಡೆಗೆ ಬರುತ್ತಿದ್ದ ಬಸ್ಸಿನ ಹಾರ್ನ್‌ ನಿಂದ ಕರ್ಕಶವಾದ ಶಬ್ಧವನ್ನು ಹೊರಹೊಮ್ಮಿಸಿ ಸಾರ್ವಜನಿಕರಿಗೆ ಉಪದ್ರವವನ್ನು ಉಂಟುಮಾಡಿದ್ದು ಸುದರ್ಶನ ದೊಡಮನಿ ಅವರು ಆತನಿಗೆ ಆತನ ತಪ್ಪಿನ ಬಗ್ಗೆ ತಿಳಿ ಹೇಳಿ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 290 ಐಪಿಸಿ ಮತ್ತು 194ಎಫ್‌ ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

error: No Copying!