Spread the love

ಉಡುಪಿ: ದಿನಾಂಕ: 03-07-2024 (ಹಾಯ್ ಉಡುಪಿ ನ್ಯೂಸ್) ಉಡುಪಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು 10 ಲಕ್ಷ ಕ್ಕೂ ಹೆಚ್ಚಿನ ಅವ್ಯವಹಾರ ನಡೆಸಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೆಡ್ ಕ್ರಾಸ್ ಸಂಸ್ಥೆ ಉಡುಪಿಯಲ್ಲಿ ದಿನಾಂಕ: 12/11/2020 ರಿಂದ ದಿನಾಂಕ: 17/11/2021 ರ ವರೆಗೆ 1 ನೇ ಆರೋಪಿ  ಶಿವರಾಮ ಎಂಬವರು ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಯಾಗಿ, 2 ನೇ ಆರೋಪಿ ಜಯರಾಮ ಎಂಬವರು ಕಾರ್ಯದರ್ಶಿಯಾಗಿ, 3ನೇ ಆರೋಪಿ ಅರವಿಂದ ಖಜಾಂಚಿಯಾಗಿ ಹಾಗೂ 4 ನೇ ಆರೋಪಿ ಸನ್ಮತ್‌ ಆಡಳಿತ ಮಂಡಳಿಯ ಸದಸ್ಯನಾಗಿ ಕರ್ತವ್ಯ ನಿರ್ವಹಿಸಿದ್ದು, ಆ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಶಾಖೆಯ ಹಣವನ್ನು  ಇವರೆಲ್ಲರೂ ಒಳಸಂಚು ನಡೆಸಿ, ಸರಿಯಾದ ಲೆಕ್ಕವನ್ನು ನಿರ್ವಹಿಸದೇ  ಒಟ್ಟು ರೂ 10,16,705/- ರೂಪಾಯಿ ಹಣವನ್ನು ಅಕ್ರಮವಾಗಿ ತಮ್ಮ ಸ್ವಂತಕ್ಕೆ ದುರುಪಯೋಗಪಡಿಸಿಕೊಂಡು ಅದರ ಬಗ್ಗೆ ಸರಿಯಾದ ಲೆಕ್ಕ ಪತ್ರಗಳನ್ನು ಪ್ರಸ್ತುತ ಕಾರ್ಯದರ್ಶಿ/ ಆಡಳಿತ ಮಂಡಳಿಯ ಮುಂದೆ ಹಾಜರುಪಡಿಸದೇ ನಂಬಿಕೆ ದ್ರೋಹದ ಅಪರಾಧ ಎಸಗಿದ್ದಾರೆ ಎಂದು ಬೈಲೂರು , ಶಾಂತಿ ನಗರ ನಿವಾಸಿ ರಾಜೀವ (72) ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 120(B) 403 409  477 A  ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

error: No Copying!