- ದಿನಾಂಕ: 25-06-2024 (ಹಾಯ್ ಉಡುಪಿ ನ್ಯೂಸ್) ಶಂಕರನಾರಾಯಣ ಬಸ್ಸು ನಿಲ್ದಾಣದ ಬಳಿ ತಡರಾತ್ರಿ ಕಾರೊಂದರಲ್ಲಿ ಬಂದು ಜಾನುವಾರು ಕಳ್ಳತನ ನಡೆಸಲು ವಿಫಲ ಯತ್ನ ನಡೆಸಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಜನಾರ್ಧನ ಜೋಗಿ ಅವರು ದೂರು ದಾಖಲಿಸಿದ್ದಾರೆ.
- ಶಂಕರನಾರಾಯಣ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಜನಾರ್ಧನ ಜೋಗಿ ಅವರು ದಿನಾಂಕ :24-06-2024 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಶಂಕರನಾರಾಯಣ ಬಸ್ಸು ನಿಲ್ದಾಣದ ಪರಿಸರದಲ್ಲಿ ಸಂಚರಿಸಿಕೊಂಡಿರುವಾಗ ರಾತ್ರಿ 1:56 ಗಂಟೆಗೆ ಸಿದ್ದಾಪುರ ಕಡೆಯಿಂದ ಒಂದು ನೀಲಿ ಬಣ್ಣದ ಕಾರು ಬಂದು ಶಂಕರನಾರಾಯಣ ಬಸ್ ನಿಲ್ದಾಣದ ಬಳಿ ಇರುವ ಉಪ್ಪುರರ ಅಂಗಡಿಯ ಎದುರು ಹಾಲಾಡಿ ಕಡೆಗೆ ಮುಖ ಮಾಡಿ ನಿಂತಿದ್ದು ಕಾರಿನಿಂದ ಇಬ್ಬರು ವ್ಯಕ್ತಿಗಳು ಇಳಿದಿದ್ದು ಅವರ ಪೈಕಿ ಮುಖಕ್ಕೆ ಮಾಸ್ಕ ದರಿಸಿದ್ದ ಓರ್ವ ವ್ಯಕ್ತಿಯು ಕಾರಿನ ಹಿಂಬದಿಯ ಡಿಕ್ಕಿಯನ್ನು ತೆರೆದು ಅಲ್ಲಿಯೇ ಕಾರಿನ ಸಮೀಪ ರಸ್ತೆಯ ಬದಿಯಲ್ಲಿ ಮಲಗಿದ್ದ ದನಗಳ ಪೈಕಿ ಒಂದು ಬಿಳಿ ಬಣ್ಣದ ಕರುವೊಂದನ್ನು ಕಳ್ಳತನದಿಂದ ಎಳೆದುಕೊಂಡು ಹೋಗಿ ಕಾರಿನ ಡಿಕ್ಕಿಗೆ ಹಾಕುತ್ತಿರುವುದನ್ನು ಗಮನಿಸಿ ಕೂಡಲೇ ಪೊಲೀಸರು ಕೂಗುತ್ತಾ ಕಾರಿನತ್ತ ಓಡಿ ಹೋಗಿದ್ದು ಆ ಕೂಡಲೇ ಅಪರಿಚಿತ ವ್ಯಕ್ತಿಗಳು ಕರುವನ್ನು ಕಾರಿನಿಂದ ಇಳಿಸಿ ಅಲ್ಲಿಯೇ ಬಿಟ್ಟು ಕಾರಿನ ಡಿಕ್ಕಿಯನ್ನು ಬಂದ್ ಮಾಡಿ ಕಾರಿನಲ್ಲಿ ಕುಳಿತು ಕಾರನ್ನು ಹಾಲಾಡಿ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿರುತ್ತಾರೆ. ಅ ವ್ಯಕ್ತಿಗಳು ಕಾರಿನಲ್ಲಿ ದನ ಕಳವು ಮಾಡುವ ಉದ್ದೇಶದಿಂದ ಬಂದಿರುವುದಾಗಿ ದೂರು ನೀಡಿದ್ದಾರೆ.
- ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ: 379, 511 ಜೊತೆಗೆ 34 ಐಪಿಸಿ. ಹಾಗೂ ಕಲಂ: 8,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ರಂತೆ ಪ್ರಕರಣ ದಾಖಲಾಗಿದೆ.