ಬ್ರಹ್ಮಾವರ:ದಿನಾಂಕ : 25-06-2024 (ಹಾಯ್ ಉಡುಪಿ ನ್ಯೂಸ್) ಪೇತ್ರಿಯ ಬಾರ್ ಎಂಡ್ ರೆಸ್ಟೋರೆಂಟ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಾಗಿದೆ.
ಬ್ರಹ್ಮಾವರ ತಾಲೂಕು ಚೇರ್ಕಾಡಿ ಗ್ರಾಮದ, ಪೇತ್ರಿಯ ಸುರಭಿ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುವ ಪ್ರಕಾಶ್ (47) ಎಂಬುವವರು ದಿನಾಂಕ 24/06/2024 ರಂದು ಬೆಳಿಗ್ಗೆ ಬಾರ್ನಲ್ಲಿ ನಡೆಸಿದ ದೈನಂದಿನ ವ್ಯವಹಾರದ ಹಣವನ್ನು ಪೇತ್ರಿಯ ಬ್ಯಾಂಕ್ಗೆ ಜಮೆ ಮಾಡಿ ಬರುವುದಾಗಿ ಹಣವನ್ನು ತೆಗೆದುಕೊಂಡು ಹೋದವರು ವಾಪಾಸು ಬಾರದೇ ಇದ್ದು,ಅವರ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿರುತ್ತದೆ ಎನ್ನಲಾಗಿದೆ.
ನಂತರ ಈ ಬಗ್ಗೆ ವಿಚಾರಿಸಿದಾಗ ಮಧ್ಯಾಹ್ನ ಬಾರ್ಲೈಸನ್ಸ್ ಬಗ್ಗೆ ಉಡುಪಿ ಅಬಕಾರಿ ಇಲಾಖೆಗೆ ಹೋಗಿರುವುದಾಗಿ ತಿಳಿದು ಬಂದಿರುತ್ತದೆ ಎನ್ನಲಾಗಿದೆ. ಪ್ರಕಾಶ್ ರವರು ಬಾರ್ಗೂ ಬಾರದೇ, ಮನೆಗೆ ಹೋಗದೇ ಕಾಣೆಯಾಗಿರುತ್ತಾರೆ ಎಂದು ಬಾರ್ ಮಾಲೀಕರು ದೂರು ನೀಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿದೆ.