ಮಣಿಪಾಲ: ದಿನಾಂಕ:23-06-2024(ಹಾಯ್ ಉಡುಪಿ ನ್ಯೂಸ್) ಕುಂಜಿಬೆಟ್ಟು ನಿವಾಸಿ ಯುವತಿಯೋರ್ವರನ್ನು ಮುಂಬೈ ಪೊಲೀಸರೆಂದು ಹೇಳಿ ನಂಬಿಸಿ ಆನ್ ಲೈನ್ ಮೂಲಕ ವಂಚಿಸಿರುವ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ , ಕುಂಜಿಬೆಟ್ಟು ನಿವಾಸಿ ನಮ್ರತಾ (33) ಎಂಬವರು ಮಣಿಪಾಲದ WGSHA ದಲ್ಲಿ ಅಸಿಸ್ಟಂಟ್ ಪ್ರೊಪಸರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 22.06.2024 ರಂದು ಕೆಲಸದಲ್ಲಿರುವ ಸಮಯ ನಮ್ರತಾ ರವರ ಮೊಬೈಲ್ ನಂಬ್ರಕ್ಕೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ತನ್ನ ಹೆಸರು ಸಂಜಯ್ ಕುಮಾರ್ ತಾನು ಪೆಡೆಕ್ಸ್ ಕಂಪನಿ ಉದ್ಯೋಗಿ ಎಂದು ತಿಳಿಸಿ ನಿಮ್ಮ ಹೆಸರಿನಲ್ಲಿ ಒಂದು ಪಾರ್ಸಲ್ ಬಂದಿದೆ ಎಂದು ತಿಳಿಸಿ ಪಾರ್ಸಲ್ ನಲ್ಲಿ 5 ಇರಾನಿ ಪಾಸ್ ಪೋರ್ಟ್ , 5 ಡೆಬಿಟ್ ಕಾರ್ಡ್ , 2 ಕೆ ಜಿ ಬಟ್ಟೆ, 150 ಗ್ರಾಂ MDMA ಇರುವುದಾಗಿ ತಿಳಿಸಿ, ಈ ಮಾಹಿತಿಯನ್ನು ನಾವು ಮುಂಬೈ ಪೊಲೀಸ್ ರಿಗೆ ತಿಳಿಸಿ FIR ಮಾಡಿಸಿರುವುದಾಗಿ ಹೇಳಿ, ನೀವು ಮುಂಬೈ ಪೊಲೀಸ್ ರೊಂದಿಗೆ ಮಾತನಾಡಿ ಎಂದು ಹೇಳಿ ಅಪರಿಚಿತ ವ್ಯಕ್ತಿ ಬೇರೊಬ್ಬ ವ್ಯಕ್ತಿಗೆ ಕರೆ ಯನ್ನು ಸಂಪರ್ಕಿಸಿದ್ದಾನೆ ಎಂದು ದೂರಿದ್ದಾರೆ.
ಆ ವ್ಯಕ್ತಿಯು ನಮ್ರತಾ ರವರಿಗೆ ಈ ಕೇಸಿನ FIR ಕುರಿತು ಖುದ್ದು ಮುಂಬೈ ಗೆ ಬರುತ್ತೀರಾ ಅಥವಾ ಆನ್ ಲೈನ್ ನಲ್ಲಿ ತನಿಖೆಗೆ ಸಹಕರಿಸುತ್ತೀರಾ ಎಂದು ಕೇಳಿದಾಗ ನಮ್ರತಾ ರವರು ಆನ್ ಲೈನ್ ನಲ್ಲಿ ತನಿಖೆಗೆ ಸಹಕರಿಸುವುದಾಗಿ ತಿಳಿಸಿದಾಗ Skype App ಡೌನ್ ಲೋಡ್ ಮಾಡುವಂತೆ ತಿಳಿಸಿದಾಗ ನಮ್ರತಾ ರವರು App ಡೌನ್ ಲೋಡ್ ಮಾಡಿದಾಗ ಆ App ಗೆ ಒಂದು ವಿಡೀಯೋ ಕರೆ ಮಾಡಿದ ಆ ವ್ಯಕ್ತಿ ತಾನು ಮುಂಬೈ ಪೊಲೀಸ್ ಎಂದು ಹೇಳಿ ತನ್ನ ಹೆಸರು ಪ್ರದೀಪ್ ಸಾವಂತ್ ಎಂದು ತಿಳಿಸಿ ನಮ್ರತಾ ರವರ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಡೆಬಿಟ್ ಕಾರ್ಡ್ ಗಳ ಮಾಹಿತಿಯನ್ನು ಪೆಡೆದು ನಮ್ರತಾ ರವರ ಖಾತೆ ಸಂಖ್ಯೆಗೆ 7,90,000 /- ರೂ Pre Approved Personal Loan On Credit Card OTL For Police Verification ಎಂದು ಹೇಳಿ ಹಣವನ್ನು ಮೋಸ ಮಾಡಿ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 66(C) 66 (D) IT Act ಮತ್ತು 419 420 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.