ಕುಂದಾಪುರ: ದಿನಾಂಕ 23-06-2024 (ಹಾಯ್ ಉಡುಪಿ ನ್ಯೂಸ್) ಕೋರ್ಗಿ ಗ್ರಾಮದ ಮೂಡು ಕೋರ್ಗಿ ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಏಳು ಜನರನ್ನು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಭೀಮಾಶಂಕರ ಸಿನ್ನೂರ ಅವರು ಬಂಧಿಸಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ (ಕಾ&ಸು) ಯವರಾದ ಭೀಮಾ ಶಂಕರ ಸಿನ್ನೂರ ಅವರಿಗೆ ದಿನಾಂಕ : 22-06-2024ರಂದು ಸಾರ್ವಜನಿಕರು ಪೋನ್ ಮಾಡಿ ಕುಂದಾಪುರ ತಾಲೂಕು ಕೋರ್ಗಿ ಗ್ರಾಮದ ಮೂಡು ಕೋರ್ಗಿ ಎಂಬಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದಾರೆಂದು ಖಚಿತ ಮಾಹಿತಿ ನೀಡಿದ ಮೇರೆಗೆ ಪಿಎಸ್ಐ ಯವರು ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ಸ್ಥಳಕ್ಕೆ ದಾಳಿ ನಡೆಸಿದಾಗ 7 ಜನರು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅಂದರ್‌ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದು ಆರೋಪಿತರಾದ ದಿನೇಶ ಎಸ್, ಶೇಖರ , ಮಂಜುನಾಥ , ಉದಯ, , ಹೆರಿಯ , ಸುಭಾಷ್, ಸುಭಾಶ್ಚಂದ್ರ ಎಂಬವರನ್ನು ಸಿಬ್ಬಂದಿಯವರ ಸಹಾಯದಿಂದ ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .
ಆರೋಪಿಗಳು ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ್ದ ನಗದು ರೂ. 11,820/- 2) ಖಾಕಿ ಬಣ್ಣದ ರಟ್ಟಿನ ಬಾಕ್ಸ್-1, 3) ಹಸಿರು ಬಣ್ಣದ ಪ್ಲಾಸ್ಟಿಕ್, 4) 52 ಇಸ್ಪೀಟ್ ಎಲೆಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಕಲಂ 87 ಕೆ KP Act ಯಂತೆ ಪ್ರಕರಣ ದಾಖಲಾಗಿದೆ..