- ಅಜೆಕಾರು: ದಿನಾಂಕ 31/05/2024 (ಹಾಯ್ ಉಡುಪಿ ನ್ಯೂಸ್) ಯಾವುದೋ ದುಷ್ಕೃತ್ಯ ನಡೆಸುವ ಉದ್ದೇಶ ದಿಂದ ಕಾರಿನಲ್ಲಿ ಮಾರಕಾಸ್ತ್ರ ಇಟ್ಟುಕೊಂಡು ಬಂದಿದ್ದ ವರ ಕಾರನ್ನು ಅಜೆಕಾರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು (ಕಾ ಮತ್ತು ಸು)ರಾದ ರವಿ ಬಸಪ್ಪ ಕಾರಗಿ ಅವರು ವಶಪಡಿಸಿಕೊಂಡಿದ್ದಾರೆ.
- ಅಜೆಕಾರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ರವಿ ಬಸಪ್ಪ ಕಾರಗಿ ಎಂಬವರು ದಿನಾಂಕ :30-05-2024 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ರಾತ್ರಿ ಸಮಯ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಕೈಕಂಬ ಬಳಿ ಒಂದು ವಾಹನ ಸಂಶಯಸ್ಪಾದ ರೀತಿಯಲ್ಲಿ ಬರುತ್ತಿರುವುದನ್ನು ಕಂಡು ನಿಲ್ಲಿಸಲು ಸೂಚನೆ ನೀಡಿದಾಗ ವಾಹನದಲ್ಲಿದ್ದವರು ವಾಹನವನ್ನು ನಿಲ್ಲಿಸದೇ ಹೋಗಿದ್ದು, ಕೂಡಲೇ ಪೊಲೀಸರು ವಾಹನವನ್ನು ಬೆನ್ನಟ್ಟಿಕೊಂಡು ಹೋಗಿ ಮರ್ಣೆ ಗ್ರಾಮದ ಎಣ್ಣೆಹೊಳೆ ಎಂಬಲ್ಲಿ ತಡೆದು ನಿಲ್ಲಿಸಿದಾಗ ವಾಹನವನ್ನು ಚಲಾಯಿಸುತ್ತಿದ್ದ ಚಾಲಕ ವಾಹನವನ್ನು ನಿಲ್ಲಿಸಿ ಓಡಿ ಹೋಗಿದ್ದು, ವಾಹನದ ಹತ್ತಿರ ಹೋಗಿ ನೋಡಿದಾಗ ಬಿಳಿ ಬಣ್ಣದ ಬೊಲೆರೋ ವಾಹನವಾಗಿದ್ದು ಇದರ ನಂಬ್ರ KA-19-MB-8753 ಆಗಿದ್ದು ವಾಹನದ ಒಳಗಡೆ ಪರಿಶೀಲಿಸಿದಾಗ ಹರಿತವಾದ 1 ಡ್ರ್ಯಾಗರ್ ಇದ್ದು, ಯಾವುದೋ ಕೃತ್ಯ ನಡೆಸುವ ಉದ್ದೇಶವನ್ನು ಇಟ್ಟುಕೊಂಡು ವಾಹನದಲ್ಲಿ ಬಂದು ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಾದ ಕೈಕಂಬದಲ್ಲಿ ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದೇ ಹೋಗಿದ್ದಾರೆ ಎಂದು ದೂರು ನೀಡಿದ್ದಾರೆ.
- ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಕಲಂ: 511 ಐಪಿಸಿ ಮತ್ತು 25(1)(b) ಐ.ಎ ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.