- ಗಂಗೊಳ್ಳಿ: ದಿನಾಂಕ 31/05/2024 (ಹಾಯ್ ಉಡುಪಿ ನ್ಯೂಸ್) ಪಡುಕೋಣೆ ಬಸ್ ನಿಲ್ದಾಣದಲ್ಲಿ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದ ಯುವಕನನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಹರೀಶ್ ಆರ್ ಅವರು ಬಂಧಿಸಿದ್ದಾರೆ.
- ಗಂಗೊಳ್ಳಿ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಹರೀಶ್ ಆರ್ ರವರು ದಿನಾಂಕ: 31-05-2024 ರಂದು ರೌಂಡ್ಸ್ ನಲ್ಲಿರುವಾಗ ನಾಡಾ ಗ್ರಾಮದ ಪಡುಕೋಣೆ ಬಸ್ ನಿಲ್ದಾಣದ ಬಳಿ ಓರ್ವ ವ್ಯಕ್ತಿ ಕುಳಿತಿದ್ದು, ಆತನನ್ನು ಮಾತನಾಡಿಸಿದಾಗ ತೊದಲುತ್ತ ಮಾತನಾಡಿದ್ದು, ಅಮಲು ಪದಾರ್ಥ ಸೇವಿಸಿ ಅಮಲಿನಲ್ಲಿರುವುದು ಕಂಡು ಬಂದಿದ್ದು ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವಂತೆ ಅನುಮಾನ ಬಂದ ಮೇರೆಗೆ ಆತನ ಹೆಸರು ವಿಳಾಸ ವಿಚಾರಿಸಿದಾಗ ಸಂಪತ್(23) ಎಂಬುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
- ಆಪಾದಿತ ಸಂಪತ್ ನು ಗಾಂಜಾದಂತಹ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಅನುಮಾನ ಬಂದಿರುವುದರಿಂದ ಆತನನ್ನು ಕುಂದಾಪುರ ಶ್ರೀ ಮಾತಾ ಆಸ್ಪತ್ರೆ ವೈಧ್ಯಾದಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ ಎನ್ನಲಾಗಿದೆ.
- ಆಪಾದಿತ ಸಂಪತ್ ನು ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆ ಯಲ್ಲಿ ದೃಢಪಟ್ಟಿದೆ ಎನ್ನಲಾಗಿದೆ.
- ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ: 27(B) NDPS Act ರಂತೆ ಪ್ರಕರಣ ದಾಖಲಾಗಿದೆ.