ಬೆಂಗಳೂರು: ದಿನಾಂಕ:31-05-2024 (ಹಾಯ್ ಉಡುಪಿ ನ್ಯೂಸ್)
ಓರ್ವ ಸಂಸದನಾಗಿ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ದಂತಹ ನೀಚ ಕ್ರತ್ಯ ಎಸಗಿ ರಾಜ್ಯದ ಮಾನ ಹರಾಜು ಹಾಕಿ ದೇಶದಿಂದ ಪರಾರಿಯಾಗಿದ್ದ ವಿಕ್ರತ ಕಾಮಿ, ಕಾಮುಕ ಪ್ರಜ್ವಲ್ ರೇವಣ್ಣ ಕೊನೆಗೂ ಅರೆಸ್ಟ್ ಆಗಿದ್ದಾನೆ.
ಕೆಲಸ ಕೇಳಿ ಬರುತ್ತಿದ್ದ ವಿದ್ಯಾವಂತ ಯುವತಿಯರು,ಸರಕಾರಿ ನೌಕರರು, ಪಕ್ಷದ ಕಾರ್ಯಕರ್ತ ಯುವತಿಯರನ್ನು ತನ್ನ ಹಣ ಮತ್ತು ಅಧಿಕಾರದ ದರ್ಪದಿಂದ ಬೆದರಿಸಿ ತನ್ನ ಕಾಮ ತ್ರಷೆಗೆ ಬಳಸಿಕೊಂಡು ಆ ಘಟನೆಗಳ ಮೊಬೈಲ್ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದ ವಿಕ್ರತ ಕಾಮುಕ ಸಂಸದ ಪ್ರಜ್ವಲ್ ರೇವಣ್ಣ ತನ್ನ ದುಷ್ಕೃತ್ಯಗಳು ಪೆನ್ ಡ್ರೈವ್ ನಿಂದ ಬಯಲಾಗುತ್ತಿದ್ದಂತೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿ ದೇಶದಿಂದ ಪರಾರಿಯಾಗಿದ್ದ.
ಕಾಮುಕ ಪ್ರಜ್ವಲ್ ನೂರಕ್ಕೂ ಹೆಚ್ಚು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಸುಮಾರು 2,976 ಅಶ್ಲೀಲ ವಿಡಿಯೋ ಗಳನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿ ಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಈತನ ಮೇಲೆ ಹೊಳೆನರಸೀಪುರ ಟೌನ್ ಹಾಗೂ ಸಿಐಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇಶ ಬಿಟ್ಟು ಪರಾರಿಯಾಗಿ ತಲೆಮರೆಸಿಕೊಂಡಿದ್ದ ರೇಪಿಸ್ಟ್ ಪ್ರಜ್ವಲ್ 34 ದಿನಗಳ ಬಳಿಕ ತನ್ನ ಅಡಗು ತಾಣ ಜರ್ಮನಿಯ ಮ್ಯೂನಿಕ್ ನಗರದಿಂದ ಹೊರಟು ಗುರುವಾರ ತಡರಾತ್ರಿ ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಬಂದು ಇಳಿದಿದ್ದಾನೆ.
ಗುರುವಾರ ಸಂಜೆ ಯಿಂದಲೇ ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟಿದ್ದ ಎಸ್ಐಟಿ ಪೊಲೀಸ್ ಅಧಿಕಾರಿಗಳು ಪ್ರಜ್ವಲ್ ವಿಮಾನದಿಂದ ಇಳಿದು ಬರುತ್ತಿಧ್ದಂತೆಯೇ ಅವನನ್ನು ಬಂಧಿಸಿ ಆತನನ್ನು ವೈದ್ಯಕೀಯ ಪರೀಕ್ಷೆ ಗೆ ಒಳಪಡಿಸಿ ಮುಂದಿನ ತನಿಖೆ ಗಾಗಿ ಎಸ್ಐಟಿ ಕಚೇರಿಗೆ ಕರೆದೊಯ್ದಿದ್ದಾರೆ.