Spread the love
  • ಉಡುಪಿ: ದಿನಾಂಕ:30-05-2024 (ಹಾಯ್ ಉಡುಪಿ ನ್ಯೂಸ್) ಅಂಬಾಗಿಲಿನ ಬಾರ್ ಒಂದರಲ್ಲಿ ರಾತ್ರಿ ಹೊತ್ತು ಕಳ್ಳರು ನುಗ್ಗಿ ಕಳ್ಳತನ ನಡೆಸಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  • ಉಡುಪಿ ಪುತ್ತೂರು ಗ್ರಾಮದ ನಿಟ್ಟೂರು ನಿವಾಸಿ ವಸಂತ (40) ಎಂಬವರು ಉಡುಪಿಯ ಅಂಬಾಗಿಲಿನಲ್ಲಿರುವ ಚಾಲುಕ್ಯ ಬಾರ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
  • ವಸಂತರವರು ದಿನಾಂಕ:29/05/2024 ರಂದು ರಾತ್ರಿ 11:50 ಗಂಟೆಗೆ  ಕೆಲಸ ಮುಗಿಸಿ ಬಾರ್  ಬಂದ್ ಮಾಡಿ ಮನೆಗೆ ಹೋಗಿದ್ದು. ದಿನಾಂಕ:30/05/2024 ರಂದು ಬೆಳಿಗ್ಗೆ ಸುಮಾರು 07:30 ಗಂಟೆಗೆ ಚಾಲುಕ್ಯ ಬಾರ್ ನಲ್ಲಿ ಅಡುಗೆ  ಕೆಲಸ ಮಾಡುವ ಆನಂದರವರು ಬಾರ್‌ ನ ಶೆಟರ್‌  ಸ್ವಲ್ಪ ತೆರೆದಿರುವುದನ್ನು ನೋಡಿ  ವಸಂತರವರಿಗೆ ಕರೆ ಮಾಡಿ ತಿಳಿಸಿದ್ದಾರೆ ಎಂದಿದ್ದಾರೆ .
  • ವಸಂತರವರು ಬಂದು ನೋಡಿದಾಗ ಶೆಟರಿಗೆ ಹಾಕಿದ ಎರಡು ಬೀಗಗಳು ಹಾಗೆ ಇದ್ದು ಶಟರ್ ನ ಮದ್ಯದಲ್ಲಿ ಮೇಲಕ್ಕೆ ಎತ್ತಿ ಒಳ ಪ್ರವೇಶಿಸಿ ಕ್ಯಾಶ್ ಕೌಂಟರ್ ನಲ್ಲಿ ಇಟ್ಟಿದ್ದ ರೂಪಾಯಿ 1,20,000/- ಹಣವನ್ನು ಯಾರೋ ಕಳ್ಳರು ರಾತ್ರಿ  ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  • . ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
error: No Copying!