ಶಂಕರನಾರಾಯಣ: ದಿನಾಂಕ :30/05/2024 (ಹಾಯ್ ಉಡುಪಿ ನ್ಯೂಸ್) ಸಿದ್ಧಾಪುರ ಬಸ್ ನಿಲ್ದಾಣದಲ್ಲಿ ಗಾಂಜಾ ಸೇವನೆ ಮಾಡಿದ್ದ ವ್ಯಕ್ತಿ ಯನ್ನು ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ಅವರು ಬಂಧಿಸಿದ್ದಾರೆ.
ಶಂಕರನಾರಾಯಣ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ಅವರು ದಿನಾಂಕ: 29-05-2024 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ ಸಿದ್ದಾಪುರ ಗ್ರಾಮದ ಸಿದ್ದಾಪುರ ಬಸ್ ನಿಲ್ದಾಣದ ಬಳಿ ಓರ್ವ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದಾಗಿ ಬಂದ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ತೆರಳಿ ಅಲ್ಲಿ ಗಾಂಜಾ ನಶೆಯಲ್ಲಿದ್ದ ಪ್ರವೀಣ (26) ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದು, ಆರೋಪಿಯನ್ನು ವೈದ್ಯಾಧಿಕಾರಿಗಳು ಮಾತಾ ಆಸ್ಪತ್ರೆ ಕುಂದಾಪುರ ರವರ ಮುಂದೆ ಹಾಜರುಪಡಿಸಿ ಆತನ ವೈದ್ಯಕೀಯ ಪರೀಕ್ಷೆ ನಡೆಸಿದ್ದು ಆರೋಪಿ ಪ್ರವೀಣ ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿರುತ್ತದೆ ಎನ್ನಲಾಗಿದೆ .
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ: 27(ಬಿ) NDPS ACT ರಂತೆ ಪ್ರಕರಣ ದಾಖಲಾಗಿದೆ.