ಜಲಂಧರ್: ದಿನಾಂಕ:30-05-2024(ಹಾಯ್ ಉಡುಪಿ ನ್ಯೂಸ್)
ದೇಶದ ರಕ್ಷಣೆಗಾಗಿ ನಾನು 100 ಸಲ ಬೇಕಾದರೂ ಜೈಲಿಗೆ ಹೋಗಲು ಸಿದ್ದನಿದ್ದೇನೆ . ನಾನು ಭಗತ್ ಸಿಂಗ್ ಅನುಯಾಯಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಂದು ಹೇಳಿದ್ದಾರೆ.
ಪಂಜಾಬಿನಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ನಾನು ಭಗತ್ ಸಿಂಗ್ ಅನುಯಾಯಿ ದೇಶ ರಕ್ಷಣೆಗಾಗಿ ಜೂನ್ 2 ರಂದು ಮತ್ತೆ ಜೈಲಿಗೆ ಹೋಗಲು ಸಿದ್ದನಿದ್ದೇನೆ. ಈ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.
ಇಂಡಿಯ’ ಮೈತ್ರಿ ಕೂಟ 300ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಲಿದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿಗೆ ಮಾಡಲಾಗದ ಕೆಲಸಗಳನ್ನು ಕೇಜ್ರಿವಾಲ್ ಮಾಡಿರುವುದಕ್ಕೆ ತನ್ನನ್ನು ಬಂಧಿಸಲಾಗಿದೆ ಎಂದು ದೆಹಲಿ ಸಿ.ಎಂ ಆರೋಪಿಸಿದ್ದಾರೆ.