ಉಡುಪಿ: ದಿನಾಂಕ:29-05-2024(ಹಾಯ್ ಉಡುಪಿ ನ್ಯೂಸ್) ದೈವದ ಕೆಲಸದ ವಿಚಾರವಾಗಿ ಅಣ್ಣ ಹಾಗೂ ತಮ್ಮ ನ ನಡುವೆ ನಡೆದ ವಾಗ್ವಾದದ ಕೊನೆಗೆ ಅಣ್ಣನ ಮಗ ಹಲ್ಲೆ ನಡೆಸಿದ್ದಾನೆ ಎಂದು ಸುರೇಂದ್ರ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ಮೂಡನಿಡಂಬೂರು ಗ್ರಾಮದ ನಿವಾಸಿ ಸುರೇಂದ್ರ (61) ಎಂಬವರು ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 28/05/2024 ರಂದು ಸುರೇಂದ್ರ ಅವರು ಮತ್ತು ಅವರ ದೂರದ ಸಂಬಂಧಿ ಅಣ್ಣನಾದ ತನಿಯಾ ಎಂಬವರೊಂದಿಗೆ ದೈವದೇವರ ಕೆಲಸದ ವಿಚಾರದಲ್ಲಿ ಇಬ್ಬರ ನಡುವೆ ಜೋರಾದ ಮಾತುಕತೆಯಾಗಿ ಬಳಿಕ ಇತ್ಯರ್ಥಗೊಂಡಿದ್ದು, ನಂತರ ಸಮಯ ಸುಮಾರು ಸಂಜೆ 5:30 ಗಂಟೆಗೆ ತನಿಯಾರವರ ಮಗನಾದ ಚರಣ್‌ರಾಜ್ ಎಂಬವನು ಸುರೇಂದ್ರ ರವರು ಮನೆಯಲ್ಲಿರುವಾಗ ಬಂದು ಬಾರಿ ಜೋರು ಮಾಡುತ್ತೀಯಾ ಎಂದು ಪ್ಲಾಸ್ಟಿಕ್ ಕುರ್ಚಿಯಿಂದ ತಲೆಗೆ ಹೊಡೆದಿರುವುದಾಗಿ ಸುರೇಂದ್ರ ರವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 324 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.