Spread the love

ಮಲ್ಪೆ : ದಿನಾಂಕ:29-05-2024( ಹಾಯ್ ಉಡುಪಿ ನ್ಯೂಸ್) ಮನೆಯ ಕಪಾಟಿನಲ್ಲಿ ಇಟ್ಟಿದ್ದ ಚಿನ್ನದ ಸರವನ್ನು ಸೊಸೆ ಮತ್ತು ಮೊಮ್ಮಗ ಕದ್ದಿದ್ದಾರೆ ಎಂದು ಅತ್ತೆ ಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮಲ್ಪೆ  ಕೆಳಾರ್ಕಳಬೆಟ್ಟು  ಗ್ರಾಮದ ನಿವಾಸಿ ಶಶಿಕಲಾ ಎಂಬವರ ಮಗಳು ದಿನಾಂಕ 22/05/2024 ರಂದು ಮನೆಯ ಕಪಾಟಿನಲ್ಲಿ 50 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಇಟ್ಟಿದ್ದು, ರಾತ್ರಿ 09:00 ಗಂಟೆಗೆ ಮನೆಗೆ ಬಂದು ನೋಡಿದಾಗ ಕಪಾಟಿನಲ್ಲಿ ಇಟ್ಟಿದ್ದ ಮಾಂಗಲ್ಯ ಸರ ಕಾಣಿಸದೆ ಇದ್ದು ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

. ಅದೇ ದಿನ ಶಶಿಕಲಾರವರ ಸೊಸೆ ಚಂದ್ರಕಲಾ ಮತ್ತು ಮೊಮ್ಮಗ ಪುಲಸ್ತ್ಯ ರವರು ಮನೆ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದು, ಈ ಬಗ್ಗೆ ಅವರಿಬ್ಬರಲ್ಲಿ ವಿಚಾರಿಸಿದಾಗ ಮೊದಲು ಒಪ್ಪಿಕೊಳ್ಳದೆ ಇದ್ದು, ನಂತರ 50 ಗ್ರಾಂ ಚಿನ್ನವನ್ನು ಕೊಡುವುದಾಗಿ ತಿಳಿಸಿದ್ದು, ನಂತರ ನೀಡಲು ನಿರಾಕರಿಸಿರುತ್ತಾರೆ ಎಂದು ದೂರಿದ್ದಾರೆ. ಈ ಹಿಂದೆಯು ಅವರಿಬ್ಬರೂ ಮನೆಗೆ ಬಂದಾಗ ಕೆಲವು ವಸ್ತುಗಳು ಕಾಣೆಯಾಗಿರುತ್ತದೆ. ಆದ್ದರಿಂದ ಶಶಿಕಲಾರವರಿಗೆ ಸೊಸೆಯಾದ ಚಂದ್ರಕಲಾ ಮತ್ತು ಮೊಮ್ಮಗ ಪುಲಸ್ತ್ಯರವರ ಮೇಲೆ ಅನುಮಾನ ಇರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ‌ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!