Spread the love

ಉಡುಪಿ: ದಿನಾಂಕ: 28-05-2024(ಹಾಯ್ ಉಡುಪಿ ನ್ಯೂಸ್) ಉಡುಪಿ ಶಾರದಾ ಕಲ್ಯಾಣ ಮಂಟಪ ಹೆದ್ದಾರಿಯಲ್ಲಿ ನಡೆದ ಗ್ಯಾಂಗ್ ವಾರ್ ಪ್ರಕರಣದಲ್ಲಿ ಆರೋಪಿಗಳಿಗೆ ಚಿಕಿತ್ಸೆ ನೀಡಿ ಪೊಲೀಸರಿಗೆ ಮಾಹಿತಿ ನೀಡದೆ ಅಪರಾಧಿಗಳಿಗೆ ಸಹಕರಿಸಿದ ವೈದ್ಯರ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

: ಉಡುಪಿ ನಗರ ಪೊಲೀಸ್ ಠಾಣೆಯ ಅಪರಾಧ ಕ್ರಮಾಂಕ 99/2024 ರಲ್ಲಿ ಬಂಧನಕ್ಕೊಳಗಾದ ಆರೋಪಿ ಆರೋಪಿ ಮೊಹಮ್ಮದ್ ಶರೀಫ್ ಎಂಬಾತನು ಪೊಲೀಸ್ ತನಿಖೆ ಯಲ್ಲಿ ಹೇಳಿದ ತನ್ನ ಹೇಳಿಕೆಯಲ್ಲಿ ದಿನಾಂಕ 18/05/2024 ರಂದು ರಾತ್ರಿ ಸಮಯ 01:00 ಗಂಟೆಗೆ ಉಡುಪಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಶಿವಳ್ಳಿ ಗ್ರಾಮದ ಶಾರದಾ ಕಲ್ಯಾಣ ಮಂಟಪದ ರಸ್ತೆಯ ಬಳಿ ಸುಮಾರು 6 ಜನ ಯುವಕರು ಕಾರು ಮತ್ತು ಬುಲೆಟ್ ನಲ್ಲಿ ಬಂದು ರಸ್ತೆಯಲ್ಲಿ ನಿಂತಿದ್ದ ಆರೋಪಿ ಮೊಹಮ್ಮದ್ ಶರೀಫ್ ಎಂಬಾತನ ಮೇಲೆ ಬಿಳಿ ಸ್ವಿಫ್ಟ್ ಕಾರಿನಿಂದ ಗುದ್ದಿ,ಕೆಳಗೆ ಬೀಳಿಸಿ ತಲವಾರಿನಿಂದ ಹಲ್ಲೆ ನಡೆಸಿದ ಪರಿಣಾಮ ಎಡಕಾಲು,ಬಲ ಕಿವಿ ಹಿಂಬದಿ , ಬಲಕೈ ರಕ್ತಗಾಯವಾಗಿದ್ದು. ನಂತರ ಆರೋಪಿ ಮೊಹಮ್ಮದ್ ಶರೀಫ್ ನನ್ನು ಇತರೆ ಆರೋಪಿಗಳಾದ ಅಲ್ಫಾಜ್ , ಮಜೀದ್ ಎಂಬವರು ಚಿಕಿತ್ಸೆಯ ಬಗ್ಗೆ ಪಡುಬಿದ್ರಿಯಲ್ಲಿರುವ ಸಿದ್ದಿ ವಿನಾಯಕ ಆಸ್ಪತ್ರೆಗೆ ದಿನಾಂಕ 18/05/2024 ರಂದು ಬೆಳಗಿನ ಜಾವ ಸಮಯ 2:15 ಗಂಟೆಗೆ ಕರೆದುಕೊಂಡು ಹೋಗಿದ್ದು,ಅಲ್ಲಿನ ಆಸ್ಪತ್ರೆಯ ವೈದ್ಯರಾದ ಡಾ॥ಜಾರ್ಜ್ ಸಾಜಿ ಎಂಬುವವರು ಆರೋಪಿಯನ್ನು ದಾಖಲು ಮಾಡಿಕೊಂಡು ಚಿಕಿತ್ಸೆಯನ್ನು ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ಈ ಪ್ರಕರಣವು ಕಾನೂನು ಕ್ರಮಕ್ಕೆ ಒಳಪಡುತ್ತದೆ ಎಂದು ತಿಳಿದಿದ್ದರೂ ಸಹ ಉದ್ದೇಶ ಪೂರ್ವಕವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡದೇ ಕರ್ತವ್ಯ ಲೋಪ ಎಸಗಿದ ಡಾ॥ಜಾರ್ಜ್ ಸಾಜಿ ರವರ ವಿರುದ್ಧ  ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ   ಕಲಂ: 175 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!