ಉಡುಪಿ: ದಿನಾಂಕ: 28/05/2024 (ಹಾಯ್ ಉಡುಪಿ ನ್ಯೂಸ್) ನೆರೆಮನೆಯ ವ್ಯಕ್ತಿ ಅಕ್ರಮವಾಗಿ ಪ್ರವೇಶಿಸಿ ನಷ್ಟ ಉಂಟುಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪ್ರತಿಮಾ ಎಂಬವರು ದೂರು ದಾಖಲಿಸಿದ್ದಾರೆ.
ಉಡುಪಿ ಬುಡ್ನಾರು ನಿವಾಸಿ ಪ್ರತಿಮಾ (47) ಎಂಬವರ ನೆರೆಮನೆಯ ನಿವಾಸಿ ವಿನೋದ ಎಂಬಾತನು ದಿನಾಂಕ:27-05-2024 ರಂದು ಅಕ್ರಮವಾಗಿ ಪ್ರತಿಮಾರವರ ಮನೆಯ ಅಂಗಳಕ್ಕೆ ಪ್ರವೇಶಿಸಿ ಮನೆಯ ಗಾರ್ಡನ್ ನಿರ್ಮಾಣ ಮಾಡಲು ಹಾಕಿಸಿದ್ದ ಕಾಂಕ್ರೀಟ್, ಇಟ್ಟಿಗೆಗಳನ್ನು ಪಿಕಾಸಿನಿಂದ ಕೆಡವಿ ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ಧಗಳಿಂದ ಬೈದಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 447, 427, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.