- ಉಡುಪಿ: ದಿನಾಂಕ: 27-05-2024(ಹಾಯ್ ಉಡುಪಿ ನ್ಯೂಸ್) ಕಾಪು ನಿವಾಸಿ ಮೊಹಮ್ಮದ್ ಶರೀಫ್ ಎಂಬವನಿಗೆ ಸಕ್ಲೈನ್ ಮತ್ತು ಆತನ ಗ್ಯಾಂಗ್ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- ಕಾಪು ನಿವಾಸಿ ಮೊಹಮ್ಮದ್ ಶರೀಫ್ (37) ಹಾಗೂ ಆರೋಪಿ ಮೊಹಮ್ಮದ್ ಆಶೀಕ್ ರವರು ಸ್ನೇಹಿತರಾಗಿದ್ದು ಆರೋಪಿ ಮೊಹಮ್ಮದ್ ಆಶೀಕ್ ಜೈಲಿನಲ್ಲಿದ್ದಾಗ ಮೊಹಮ್ಮದ್ ಶರೀಫ್ ಆತನಿಗೆ ಸಹಾಯ ಮಾಡಿಕೊಂಡಿದ್ದ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.
- ಆರೋಪಿ ಮೊಹಮ್ಮದ್ ಆಶೀಕ್ ನು ಕಳೆದ 2 ತಿಂಗಳ ಹಿಂದೆ ಜೈಲಿನಿಂದ ಊರಿಗೆ ಬಂದಿದ್ದು ಇಬ್ಬರು ಸಹ ಒಳ್ಳೆಯ ರೀತಿಯಲ್ಲಿ ಇದ್ದರು ಎಂದಿದ್ದಾನೆ. ಆರೋಪಿ ಮೊಹಮ್ಮದ್ ಆಶೀಕ್ ನನ್ನು ಮಂಗಳೂರು ಪೊಲೀಸರು ಹುಡುಕುತ್ತಿದ್ದ ಸಮಯ ಮೊಹಮ್ಮದ್ ಶರೀಫ್ ನ ಸ್ನೇಹಿತ ಆರೋಪಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ವಿಚಾರದಲ್ಲಿ ಅವರೊಳಗೆ ಜಗಳ ಉಂಟಾಗಿ ದ್ವೇಷ ಬೆಳೆದಿದ್ದು ಮೊಹಮ್ಮದ್ ಶರೀಫ್ ನಿಗೆ ಆರೋಪಿ ಮೊಹಮ್ಮದ್ ಆಶೀಕ್ ಆ ದಿನ ಮಣಿಪಾಲದಲ್ಲಿ ಇರುವ ಬಗ್ಗೆ ಮಾಹಿತಿ ಬಂದಿದ್ದು ಈ ವಿಚಾರವನ್ನು ಪೊಲೀಸರಿಗೆ ತಿಳಿಸುವ ಉದ್ದೇಶದಿಂದ ದಿನಾಂಕ 18/05/2024 ರಂದು ರಾತ್ರಿ 01:00 ಗಂಟೆಗೆ ಮೊಹಮ್ಮದ್ ಶರೀಫ್ ನು ಅಲ್ಪಾಜ್ ಎಂಬುವವನ ಸ್ವಿಪ್ಟ್ ಕಾರ್ ನಂಬ್ರ KA-38-M-5819 ರಲ್ಲಿ ಮೊಹಮ್ಮದ್ ಶರೀಫ್, ಅಲ್ಪಾಜ್ ಮತ್ತು ಅಬ್ದುಲ್ ಮಜೀದ್ ಎಂಬವರು ಕಾಪುವಿನಿಂದ ಮಣಿಪಾಲ ಕಡೆಗೆ ಹೋಗುವಾಗ ಇಂದ್ರಾಳಿಯ ಹಳೆ ಮರದ ಸಾಮಾನು ಅಂಗಡಿಯ ಬಳಿ ಆರೋಪಿ ಇಸಾಕ್ ನು ಮೊಹಮ್ಮದ್ ಶರೀಫ್ ನ ಕಾರನ್ನು ನೋಡಿ ಅವರನ್ನು ಕೊಲ್ಲುವ ಉದ್ದೇಶದಿಂದ ತಾನು ಚಲಾಯಿಸುತ್ತಿದ್ದ ಕಾರು ನಂಬ್ರ KA-13-N-3734 ರಿಂದ ಮೊಹಮ್ಮದ್ ಶರೀಫ್ ನ ಕಾರಿಗೆ ಡಿಕ್ಕಿ ಹೊಡೆದಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.
- ನಂತರ ಕಾರಿನಲ್ಲಿದ್ದ ಉಳಿದ ಆರೋಪಿತರುಗಳಾದ ಆಶೀಕ್, ಶಾಹಿದ್, ಸಿಯಾಜ್ , ರಾಕೀಬ್ ಹಾಗೂ ಸಕ್ಲೈನ್ ರವರು ಕೈಯಲ್ಲಿ ತಲವಾರುಗಳನ್ನು ಹಿಡಿದುಕೊಂಡು ಬಂದು ಮೊಹಮ್ಮದ್ ಶರೀಫ್ ಹಾಗೂ ಅವರ ಸ್ನೇಹಿತರ ಬಳಿ ಬೀಸಿದ್ದು ಮೊಹಮ್ಮದ್ ಶರೀಫ್ ಹಾಗೂ ಅವರ ಸ್ನೇಹಿತರು ತಪ್ಪಿಸಿಕೊಂಡು ಕಾರಿನಲ್ಲಿ ಬಂದು ಕುಳಿತುಕೊಂಡು ಉಡುಪಿಯ ಕಡೆಗೆ ಬರುತ್ತಿದ್ದಾಗ ಆರೋಪಿತರುಗಳು ಕಾರನ್ನು ಹಿಂಬಾಲಿಸಿಕೊಂಡು ಶಾರದ ಕಲ್ಯಾಣ ಮಂಟಪ ಬಳಿಯ ರಸ್ತೆಯಲ್ಲಿ ಬಂದು ಆರೋಪಿತರುಗಳು ಪುನಃ ಮೊಹಮ್ಮದ್ ಶರೀಫ್ ನ ಕಾರಿಗೆ ಡಿಕ್ಕಿ ಹೊಡೆಸಿ ಕೊಲ್ಲಲು ಪ್ರಯತ್ನಿಸಿದ್ದು ಅಲ್ಲದೆ ಮೊಹಮ್ಮದ್ ಶರೀಫ್ ತನ್ನನ್ನು ರಕ್ಷಿಸಿಕೊಳ್ಳಲು ಕಾರನ್ನು ತಡೆಯಲು ಹೋದಾಗ ಆರೋಪಿ ಇಸಾಕ್ ನು ಮೊಹಮ್ಮದ್ ಶರೀಫ್ ನಿಗೆ ಕಾರನ್ನು ಡಿಕ್ಕಿ ಹೊಡೆಸಿ ಕೆಳಕ್ಕೆ ಬೀಳಿಸಿದ್ದು ಆ ಸಮಯ ಮೊಹಮ್ಮದ್ ಶರೀಫ್ ನಿಗೆ ಆರೋಪಿ ಸಕ್ಲೈನ್ ತಲವಾರಿನಿಂದ ಹೊಡೆದಿರುವುದಾಗಿ ಪೊಲೀಸರಿಗೆ ಮೊಹಮ್ಮದ್ ಶರೀಫ್ ದೂರು ನೀಡಿದ್ದಾನೆ.
- ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 143, 147, 148, 341, 324, 307 ಜೊತೆಗೆ 149 ಐಪಿಸಿ & 27 Arms Act ರಂತೆ ಪ್ರಕರಣ ದಾಖಲಾಗಿದೆ.