Spread the love

ಉಡುಪಿ: ದಿನಾಂಕ 27/05/2024 (ಹಾಯ್ ಉಡುಪಿ ನ್ಯೂಸ್) ನಗರದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಶಾರದಾ ಕಲ್ಯಾಣ ಮಂಟಪ ಜಂಕ್ಷನ್ ನಲ್ಲಿ ನಡೆದ ಗ್ಯಾಂಗ್ ವಾರ್ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀಧರ ವಸಂತ ಸತಾರೆಯವರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

ಉಡುಪಿ ನಗರ ಪೊಲೀಸ್‌ ಠಾಣೆ ಪೊಲೀಸ್ ನಿರೀಕ್ಷಕರಾದ ಶ್ರೀಧರ ವಸಂತ ಸತಾರೆ ಅವರಿಗೆ ದಿನಾಂಕ:26-05-2024 ರಂದು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಶಾರದ ಕಲ್ಯಾಣ ಮಂಟಪದ ಬಳಿ ರಾತ್ರಿಯ ವೇಳೆಯಲ್ಲಿ ಕೆಲ ಯುವಕರು ಕಾರು, ಮೋಟಾರು ಸೈಕಲ್‌ ಮತ್ತು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ಸಾವ೯ಜನಿಕವಾಗಿ ಹೊಡೆದಾಡಿಕೊಂಡ ಬಗೆಗಿನ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸ್ ನಿರೀಕ್ಷಕರು ಠಾಣೆಯ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಸಾವ೯ಜನಿಕರನ್ನು ವಿಚಾರಿಸಿ ಅವರಿಂದ ದಿನಾಂಕ 17/05/2024 ರಂದು ರಾತ್ರಿಯ ವೇಳೆಯಲ್ಲಿ  ಘಟನೆ ನಡೆದಿರುವ ಬಗ್ಗೆ ಖಚಿತಪಡಿಸಿಕೊಂಡು ಬಳಿಕ  ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ 1 ನಿಮಿಷ 30 ಸೆಕೆಂಡ್‌ನ ವಿಡಿಯೋ ತುಣುಕನ್ನು ಪರಿಶೀಲಿಸಿದ್ದು, ಅದರಲ್ಲಿ ಮಣಿಪಾಲದಿಂದ ಉಡುಪಿಗೆ ಹೋಗುವ ರಸ್ತೆಯಲ್ಲಿರುವ ಶಾರದಾ ಕಲ್ಯಾಣ ಮಂಟಪ ಜಂಕ್ಷನ್‌ನಲ್ಲಿ ಸುಮಾರು 5 ಕ್ಕಿಂತ ಹೆಚ್ಚು ಯುವಕರು ಕಾರು ನಂಬ್ರ KA-13-N-3734 ಮತ್ತು KA-38-M-5819 ಹಾಗೂ ನೊಂದಣಿ ಸಂಖ್ಯೆ ಇಲ್ಲದ ಒಂದು ಮೋಟಾರ್‌ ಸೈಕಲ್‌ ಮತ್ತು ಒಂದು ಬುಲೆಟ್‌ ನಲ್ಲಿ ಅಕ್ರಮ ಗುಂಪು ಸೇರಿ, ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಸಾವ೯ಜನಿಕವಾಗಿ ಭಯ ಹುಟ್ಟಿಸುವ ರೀತಿಯಲ್ಲಿ ತಮ್ಮೊಳಗಿನ ದ್ವೇಷದಿಂದ ಕಾರು-ಕಾರುಗಳ ಮಧ್ಯೆ ಢಿಕ್ಕಿ ಹೊಡೆಸಿಕೊಂಡು, ಒಬ್ಬಾತನಿಗೆ  ಕಾರು ಗುದ್ದಿಸಿ ರಸ್ತೆಗೆ ಬೀಳಿಸಿದ್ದು, ರಸ್ತೆಗೆ ಬಿದ್ದ ವ್ಯಕ್ತಿಯನ್ನು  ಇಬ್ಬರು ಯುವಕರು ಮಾರಾಕಾಸ್ತ್ರಗಳಿಂದ  ಹೊಡೆದಿರುತ್ತಾರೆ ಎಂದು ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 143, 147, 148 ಜೊತೆಗೆ 149 ಐಪಿಸಿ & 27 Arms Act ರಂತೆ ಪ್ರಕರಣ ದಾಖಲಾಗಿದೆ.

error: No Copying!