ಉಡುಪಿ: ದಿನಾಂಕ 27/05/2024 (ಹಾಯ್ ಉಡುಪಿ ನ್ಯೂಸ್) ಉಡುಪಿ -ಮಣಿಪಾಲ ಮುಖ್ಯ ರಸ್ತೆಯ ಶಾರದಾ ಮಂಟಪ ಜಂಕ್ಷನ್ ಬಳಿ ನಡೆದ ಗ್ಯಾಂಗ್ ವಾರ್ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮೊಹಮ್ಮದ್ ಸಕ್ಲೈನ್ ಎಂಬವನು ತನ್ನ ಮತ್ತು ತನ್ನ ಗೆಳೆಯರ ಮೇಲೆ ಮೊಹಮ್ಮದ್ ಶರೀಫ್ ಮತ್ತಿತರರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾನೆ.
ಹೂಡೆ ಗ್ರಾಮದ, ಮಲ್ಪೆ ನಿವಾಸಿ ಮೊಹಮ್ಮದ್ ಸಕ್ಲೈನ್ (24) ಎಂಬವನು ದಿನಾಂಕ : 17-05-2024 ರಂದು ತನ್ನ ಸ್ನೇಹಿತರಾದ ಮೊಹಮ್ಮದ್ ಆಶೀಕ್, ತೌಫಿಕ್ ,ಅರ್ಷದ್ , ಇಸಾಕ್ ಎಂಬವರ ಜೊತೆ ಆತನ ಸ್ವಿಪ್ಟ್ ಕಾರ್ ನಂಬ್ರ KA-13-N- 3734 ರಲ್ಲಿ ಮತ್ತು ಉಳಿದ ಸ್ನೇಹಿತರಾದ ಶಾಹಿದ್ ತನ್ನ ಬುಲೆಟ್ ನಲ್ಲಿ ಹಾಗೂ ರಾಕೀಬ್ ತನ್ನ ಮೋಟಾರು ಸೈಕಲಿನಲ್ಲಿ ಕಾಪುವಿನಿಂದ ಹೊರಟು ಮಣಿಪಾಲದಲ್ಲಿ ಊಟ ಮಾಡಿ ವಾಪಾಸು ಮಣಿಪಾಲದಿಂದ ಕಾಪು ಕಡೆಗೆ ಹೋಗುತ್ತಿದ್ದಾಗ ದಿನಾಂಕ 18/05/2024 ರಂದು ರಾತ್ರಿ 01:00 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಶಾರದ ಕಲ್ಯಾಣ ಮಂಟಪದ ಬಳಿ ಅವರ ಹಿಂದಿನಿಂದ ಗ್ರೇ ಬಣ್ಣದ ಕಾರಿನಲ್ಲಿ ಬಂದ ಆರೋಪಿತರಾದ ಮೊಹಮ್ಮದ್ ಶರೀಪ್, ಆಲ್ಪಾಜ್, ಮಜೀದ್ ಎಂಬವರು ಮೊಹಮ್ಮದ್ ಸಕ್ಲೈನ್ ಪ್ರಯಾಣಿಸುತ್ತಿದ್ದ ಕಾರ್ ಮತ್ತು ಅವರ ಸ್ನೇಹಿತರ ಮೋಟಾರ್ ಸೈಕಲ್ ಗಳನ್ನು ಅಡ್ಡ ಹಾಕಿ ನಿಲ್ಲಿಸಿದಾಗ, ಮೊಹಮ್ಮದ್ ಸಕ್ಲೈನ್ ಮತ್ತು ಅವರ ಸ್ನೇಹಿತರು ಗ್ರೇ ಬಣ್ಣದ ಕಾರಿನಲ್ಲಿದ್ದ ಮೊಹಮ್ಮದ್ ಶರೀಫ್ ರವರಲ್ಲಿ ತಮ್ಮ ಕಾರು ಮತ್ತು ಮೋಟಾರು ಸೈಕಲ್ ಗಳನ್ನು ಅಡ್ಡ ಹಾಕಿದ್ದು ಯಾಕೆ ಎಂದು ಕೇಳಿದಾಗ ಆರೋಪಿತರಾದ ಮೊಹಮ್ಮದ್ ಶರೀಫ್ ಎಂಬಾತನು ತನ್ನ ಕೈಯಲ್ಲಿ ತಲವಾರ್, ದೊಣ್ಣೆಯನ್ನು ಹಿಡಿದುಕೊಂಡು ತನ್ನ ಜೊತೆ ಅಲ್ಪಾಜ್ ಮತ್ತು ಮಜೀದ್ ಜೊತೆ ಕಾರಿನಿಂದ ಇಳಿದು ಬಂದು ಅವಾಚ್ಯ ಶಬ್ದಗಳಿಂದ ಬೈದು ಮೊಹಮ್ಮದ್ ಸಕ್ಲೈನ್ ನನ್ನು ಕೊಲ್ಲುವ ಉದ್ದೇಶದಿಂದ ತನ್ನ ಕೈಯಲಿದ್ದ ದೊಣ್ಣೆ ಮತ್ತು ತಲವಾರ್ ನ್ನು ಬೀಸಿದ್ದು ಮೊಹಮ್ಮದ್ ಸಕ್ಲೈನ್ ತಪ್ಪಿಸಲು ಹೋದಾಗ ಮೊಹಮ್ಮದ್ ಸಕ್ಲೈನ್ ನ ಕಾಲಿಗೆ ತಾಗಿ ರಕ್ತಸಿಕ್ತ ಗಾಯವಾಗಿದ್ದು ಈ ಘಟನೆಯನ್ನು ತಪ್ಪಿಸಲು ಬಂದ ಮೊಹಮ್ಮದ್ ಸಕ್ಲೈನ್ ನ ಸ್ನೇಹಿತರಿಗೂ ಆರೋಪಿತರುಗಳು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿ ತಾವು ಬಂದ ಕಾರಿನಲ್ಲಿ ಪರಾರಿಯಾಗಿರುವುದಾಗಿ ಮೊಹಮ್ಮದ್ ಸಕ್ಲೈನ್ ಪೊಲೀಸರಿಗೆ ದೂರು ನೀಡಿದ್ದಾನೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 341, 323, 324 ,504, 506 307 ಜೊತೆಗೆ 34 ಐಪಿಸಿ & 27 Arms Act ರಂತೆ ಪ್ರಕರಣ ದಾಖಲಾಗಿದೆ.