Spread the love

ಬ್ರಹ್ಮಾವರ: ದಿನಾಂಕ 22/05/2024 (ಹಾಯ್ ಉಡುಪಿ ನ್ಯೂಸ್) ಉಪ್ಪೂರು ಗ್ರಾಮದ ಸಾಲ್ಮರ ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಬ್ರಹ್ಮಾವರ ಪೊಲೀಸ್ ಠಾಣೆಯ ಪಿಎಸ್ಐ ಯವರಾದ  ಮಧು ಬಿ ಈ ಅವರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬ್ರಹ್ಮಾವರ ಪೊಲೀಸ್‌ ಠಾಣೆ ಪಿಎಸ್ಐ ಯವರಾದ ಮಧು ಬಿ ಈ ಅವರು ದಿನಾಂಕ : 21-05-2024 ರಂದು ಉಪ್ಪೂರು ಗ್ರಾಮದ ಸಾಲ್ಮರ ಎಂಬಲ್ಲಿರುವ ಸ್ಪಂದನ ಚೌದ್ದಿಕ್‌ ದಿವ್ಯಾಂಗ ವಸತಿ ಗೃಹದ ರಸ್ತೆಯಲ್ಲಿ ಇಲಾಖೆ ಯ ಜೀಪಿನಲ್ಲಿ ಹೋಗುತ್ತಿರುವಾಗ ರಸ್ತೆಯ ಬಲ ಬದಿಯ ಹಾಡಿಯಲ್ಲಿ ಕೆಲವು ಜನರು ಸೇರಿರುವುದು ಕಂಡು ಬಂದು  ವಾಹನವನ್ನು ಮರೆಯಲ್ಲಿ ನಿಲ್ಲಿಸಿ ಇಳಿದು ಹೋಗಿ ನೋಡಿದಾಗ ಹಾಡಿಯ ಮಧ್ಯದಲ್ಲಿರುವ ಖಾಲಿ ಜಾಗದಲ್ಲಿ ಜನರು ಗುಂಪು ಸೇರಿಕೊಂಡು ಕೋಳಿ ಅಂಕ ಜುಗಾರಿ ನಡೆಸುತ್ತಿದ್ದದ್ದನ್ನು ಗಮನಿಸಿ  ಅಲ್ಲಿಗೆ ದಾಳಿ ನಡೆಸಿದಾಗ ಆರೋಪಿ ಪ್ರಕಾಶ್‌ ಹಾಗೂ ಇತರರು ತಾವು ತಂದಿರುವ ಕೋಳಿಯೊಂದಿಗೆ ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಕೋಳಿ ಕಾಲಿಗೆ ಕಟ್ಟುವ 2 ಬಾಲು, ಹಾಗೂ 2 ದಾರ ಹಾಗೂ ಒಟ್ಟು 50 ಕುರ್ಚಿಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾದೀನಪಡಿಸಿಕೊಂಡಿದ್ದಾರೆ.

ಅಕ್ರಮವಾಗಿ ತಮ್ಮ ಸ್ವಂತ ಲಾಭಕ್ಕೋಸ್ಕರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಸೇರಿಸಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜುಗಾರಿ ಆಟ ನಡೆಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  US 87, 93 KP Act & 11(1A) Animal Cruelty Actರಂತೆ ಪ್ರಕರಣ ದಾಖಲಾಗಿದೆ.

error: No Copying!