ಬೆಂಗಳೂರು: ದಿನಾಂಕ:22-05-2024 (ಹಾಯ್ ಉಡುಪಿ ನ್ಯೂಸ್)
ಬ್ರದರ್ ಸ್ವಾಮಿ ನಿಖಿಲ್ ಎಲ್ಲಿದೀಯಪ್ಪ ಎಂದಿದ್ದಾಯ್ತು. ಈಗ ಪ್ರಜ್ವಲ್ ಎಲ್ಲಿದೀಯಪ್ಪ ಎನ್ನುತ್ತಿದ್ದಾರೆ ಬ್ರದರ್ ಸ್ವಾಮಿಗಳು!
ಮಾಧ್ಯಮಗಳ ಮುಂದೆ ನಾಟಕ ಆಡುವ ಬ್ರದರ್ ಸ್ವಾಮಿಗಳಿಗೆ ಪ್ರಜ್ವಲ್ ಎಲ್ಲಿದ್ದಾನೆ,ಯಾರ ಸಖ್ಯದಲ್ಲಿದ್ದಾನೆ ಎಂಬ ಮಾಹಿತಿ ತಿಳಿದಿಲ್ಲವೇ? ತಿಳಿದಿಲ್ಲ ಎನ್ನುವುದು ಶತಮಾನದ ಜೋಕ್
ಬ್ರದರ್ ಸ್ವಾಮಿಗಳಿಗೆ ನಿಜಕ್ಕೂ ಕಳಕಳಿ ಇದ್ದರೆ ಎಸ್ಐಟಿ ಗೆ ಮಾಹಿತಿ ನೀಡಲಿ, ಇಂತಹ ನಾಟಕ ಮಾಡುವುದನ್ನು ನಿಲ್ಲಿಸಲಿ ಎಂದು ರಾಜ್ಯ ಕಾಂಗ್ರೆಸ್ ಘಟಕ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಬರೆದು ಕೊಂಡಿದೆ .