ಮಲ್ಪೆ: ದಿನಾಂಕ: 20/05/2024 (ಹಾಯ್ ಉಡುಪಿ ನ್ಯೂಸ್) ಅಲಸಂಡೆ ಮೈದಾನದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ವರನ್ನು ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ್ ಕುಮಾರ ಆರ್ ಅವರು ಬಂಧಿಸಿದ್ದಾರೆ.
ಮಲ್ಪೆ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ್ ಕುಮಾರ ಆರ್ ಅವರಿಗೆ ಮಧ್ಯಾಹ್ನ ಅಲಸಂಡೆ ಮೈದಾನದ ಸಾರ್ವಜನಿಕ ಜಾಗದಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ದಾಳಿ ನಡೆಸಿದ್ದು ಅಲ್ಲಿ ಜುಗಾರಿ ಆಟ ಆಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಅವರಲ್ಲಿ ಕೆಲವರನ್ನು ಹಿಡಿದು ಸ್ಥಳವನ್ನು ಪರಿಶೀಲಿಸಿದಾಗ ನೆಲದ ಮೇಲೆ ಪ್ಲಾಸ್ಟಿಕ್ ಚೀಲ ಅದರ ಮೇಲೆ ಇಸ್ಟೀಟು ಎಲೆಗಳು ಮತ್ತು 1500 ರೂಪಾಯಿ ಇರುವುದು ಕಂಡು ಬಂದಿದ್ದು ಇಸ್ಟೀಟು ಆಟ ಆಡುತ್ತಿದ್ದ 04 ಜನರನ್ನು ಹಿಡಿದು ಅವರುಗಳ ಹೆಸರು ವಿಳಾಸ ವಿಚಾರಿಸಿದಾಗ 1) ಸಂತೋಷ ಕುಮಾರ , 2) ಸುಕೇಶ ,3) ಸಚಿನ್ 4) ಚಂದ್ರಶೇಖರ ಎಂದು ತಿಳಿಸಿರುತ್ತಾರೆ ಎನ್ನಲಾಗಿದೆ. ಆರೋಪಿಗಳು ಆಟಕ್ಕೆ ಬಳಸಿದ ನಗದು ಹಣ 3200/-, ಬಳಸಿದ ಇಸ್ಪೀಟು ಎಲೆಗಳು , ಪ್ಲಾಸ್ಟಿಕ್ ಚೀಲವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ .
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 87 kp act ರಂತೆ ಪ್ರಕರಣ ದಾಖಲಾಗಿದೆ.