Spread the love

ಬೈಂದೂರು: ದಿನಾಂಕ 19/05/2024 (ಹಾಯ್ ಉಡುಪಿ ನ್ಯೂಸ್) ಹೇರೂರು ಗ್ರಾಮದ ಕೋಣಾಲ್ ಪಾರೆ ಎಂಬಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ನಾಲ್ವರನ್ನು ಬೈಂದೂರು ಪೊಲೀಸ್‌ ಠಾಣೆಯ ಎಎಸ್ಐ ಯವರಾದ  ನವೀನ ದೇವಾಡಿಗ  ಅವರು ಬಂಧಿಸಿದ್ದಾರೆ.

ಬೈಂದೂರು ಪೊಲೀಸ್ ಠಾಣೆ ಎ ಎಸ್ ಐ ಯವರಾದ ನವೀನ ದೇವಾಡಿಗ ಅವರಿಗೆ  ದಿನಾಂಕ:18-05-2024 ರಂದು ಠಾಣೆಯಲ್ಲಿ ಇರುವಾಗ ಹೇರೂರು ಗ್ರಾಮದ  ಕೋಣಾಲ್‌ ಪಾರೆ ಎಂಬಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಪಾರೆ  ಜಾಗದಲ್ಲಿ ಹಣವನ್ನು ಪಣವನ್ನಾಗಿರಿಸಿ ಕೋಳಿಗಳ ಕಾಲಿಗೆ ಬಾಳು ಕತ್ತಿಯನ್ನು ಕಟ್ಟಿ ಕೋಳಿ ಅಂಕದ ಆಟ ಆಡುತ್ತಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದಿದ್ದು ಕೂಡಲೇ ಸಿಬ್ಬಂದಿಯವರೊಂದಿಗೆ  ಹೇರೂರು  ತಲುಪಿ  ಮರೆಯಲ್ಲಿ ನಿಂತು ನೋಡಿದಾಗ ಅಲ್ಲಿಯ ಸಾರ್ವಜನಿಕ ಸ್ಥಳದಲ್ಲಿ  ಕೆಲವು  ಜನರು ಸೇರಿಕೊಂಡು ಹಣವನ್ನು ಪಣವನ್ನಾಗಿರಿಸಿ ಕೋಳಿಗಳ ಕಾಲಿಗೆ ಬಾಳುಕತ್ತಿಯನ್ನು ಕಟ್ಟಿ ಹಿಂಸಾತ್ಮಕವಾಗಿ ಕೋಳಿ ಅಂಕದ ಆಟ ನಡೆಸುತ್ತಿದ್ದವರನ್ನು  ಸಿಬ್ಬಂದಿಗಳ ಸಹಾಯದಿಂದ ಸುತ್ತುವರಿದು  ದಾಳಿ ನಡೆಸಿ  ಸಿಬ್ಬಂದಿಗಳ ಸಹಾಯದಿಂದ 4  ಜನರನ್ನು ಹಿಡಿದು ನಿಲ್ಲಿಸಿ ಅವರುಗಳ ಹೆಸರು ವಿಳಾಸ ವಿಚಾರಣೆ ನಡೆಸಿದಾಗ ಸುದರ್ಶನ, ಸತ್ಯನಾರಾಯಣ, ಶ್ರೀಕಾಂತ, ಗುರುದತ್ತ  ಎಂಬುದಾಗಿ ತಿಳಿಸಿದ್ದು, ಅವರನ್ನು ಬಂಧಿಸಿ ವಶಕ್ಕೆ ಪಡೆದಿದ್ದು,   ಓಡಿ ಹೋದವರ ಹೆಸರು ಚಂದ್ರ ಕೆರ್ಗಾಲ್‌, ಗಣೇಶ  ಹೆಮ್ಮಾಡಿ, ಪ್ರಮೋದ  ಕುಂದಾಪುರ, ಶರತ್‌ ಹಟ್ಟಿಯಂಗಡಿ, ಅವರು ಕೋಳಿ ಅಂಕದ ಬಗ್ಗೆ ಬಳಸಿದ 1. ಬೂಬಾ ಬಣ್ಣ ಕೋಳಿ ಹುಂಜ -1, (ಅಂದಾಜು ಮೌಲ್ಯ 800/- ರೂಪಾಯಿ) 2. ಕೆಂಪು –ಕಪ್ಪು (ಕೆಮ್ಮರ) ಬಣ್ಣದ ಕೋಳಿ ಹುಂಜ – 1 (ಅಂದಾಜು ಮೌಲ್ಯ 600/- ರೂಪಾಯಿ) 3. ಕೆಂಪು (ಉರಿಯ) ಬಣ್ಣದ ಕೋಳಿ ಹುಂಜ – 1 (ಅಂದಾಜು ಮೌಲ್ಯ 600/- ರೂಪಾಯಿ) 4. ಕಪ್ಪು –ಬಿಳಿ (ಕಡಲ)  ಬಣ್ಣದ ಕೋಳಿ ಹುಂಜ – 1 (ಅಂದಾಜು ಮೌಲ್ಯ 600/- ರೂಪಾಯಿ) 5. ಕಪ್ಪು –ಬಿಳಿ (ಕಡಲ)  ಬಣ್ಣದ ಕೋಳಿ ಹುಂಜ – 1 (ಅಂದಾಜು ಮೌಲ್ಯ 600/- ರೂಪಾಯಿ) ಬಾಳುಕತ್ತಿ-2, ಕತ್ತಿ ಕಟ್ಟಲು ಉಪಯೋಗಿಸಿದ ದಾರ-2, ಹಾಗೂ ನಗದು ರೂಪಾಯಿ 2400/- ನ್ನು  ಸ್ವಾಧೀನಪಡಿಸಿಕೊಂಡಿದ್ದಾರೆ .

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ   ಕಲಂ 11(1)A ಪ್ರಾಣಿ ಹಿಂಸೆ ನಿಷೇದ ಕಾಯಿದೆ ಮತ್ತು 87,93 ಕರ್ನಾಟಕ ಪೊಲೀಸ್ ಕಾಯಿದೆಯಂತೆ ಪ್ರಕರಣ ದಾಖಲಾಗಿದೆ.

error: No Copying!