ಬೈಂದೂರು: ದಿನಾಂಕ 19/05/2024 (ಹಾಯ್ ಉಡುಪಿ ನ್ಯೂಸ್) ಶಿರೂರು ಟೋಲ್ ಗೇಟ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಅಮಲಿನಲ್ಲಿದ್ದ ಯುವಕನನ್ನು ಬೈಂದೂರು ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಅರುಣ್ ಗೌಡ ಅವರು ಬಂಧಿಸಿದ್ದಾರೆ.
ಬೈಂದೂರು ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಅರುಣ್ ಗೌಡ ಅವರು ದಿನಾಂಕ:17-05-2024ರಂದು ಶಿರೂರು ಕಡೆ ರೌಂಡ್ಸ್ ನಲ್ಲಿರುವಾಗ ಬೆಳಿಗ್ಗೆ ಶಿರೂರು ಟೋಲ್ ಗೇಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಮಲಿನಲ್ಲಿ ತೂರಾಡಿಕೊಂಡಿದ್ದ ಆರೋಪಿತ ಸಯ್ಯದ್ ಮೂಸ(24) ಎಂಬಾತನನ್ನು ಬಂಧಿಸಿ ಠಾಣೆಗೆ ಕರೆ ತಂದಿದ್ದು, ಆರೋಪಿಯು ನಿಷೇದಿತ ಮಾಧಕ ವಸ್ತುಗಳನ್ನು ಸೇವಿಸಿರುವ ಸಂಶಯದ ಮೇರೆಗೆ ಆರೋಪಿತನನ್ನು ವೈದ್ಯಕೀಯ ತಪಾಸಣೆಯ ಬಗ್ಗೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಯವರ ಮುಂದೆ ಹಾಜರು ಪಡಿಸಿದ್ದು ಪರೀಕ್ಷಿಸಿದ ವೈದ್ಯಾಧಿಕಾರಿಯವರು ಸಯ್ಯದ್ ಮೂಸ ಗಾಂಜಾ ಸೇವಿಸಿರುವುದು ದೃಢ ಪಟ್ಟಿರುವುದಾಗಿ ವರದಿ ನೀಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 27 (ಬಿ) ಎನ್.ಡಿ.ಪಿ.ಎಸ್. ಕಾಯ್ದೆ-1985 ರಂತೆ ಪ್ರಕರಣ ದಾಖಲಾಗಿದೆ.