ಕೊಡವೂರು: ದಿನಾಂಕ:05-05-2024(ಹಾಯ್ ಉಡುಪಿ ನ್ಯೂಸ್) ದಿವ್ಯಾಂಗ ರಕ್ಷಾ ಸಮಿತಿ ಉಡುಪಿ ಮತ್ತು ರೋಟರಿ ಕ್ಲಬ್ ಕಲ್ಯಾಣಪುರ ಅವರ ಜಂಟಿ ಆಶ್ರಯದಲ್ಲಿ ಕೊಡವೂರು ವಾರ್ಡಿನ ಆಯ್ದ ವಿಕಲ ಚೇತನರಿಗೆ ಹಾಗೂ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಕಾರ್ಯಕ್ರಮವು ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀ ವಿಜಯ ಕೊಡವೂರು ಅವರ ನೇತೃತ್ವದಲ್ಲಿ ದಿನಾಂಕ: 04-05-2024 ರಂದು ಕೊಡವೂರು ವಿಪ್ರ ಶ್ರೀ ಸಭಾಭವನದಲ್ಲಿ ನಡೆಯಿತು.