ಬೆಂಗಳೂರು: ದಿನಾಂಕ:04-05-2024(ಹಾಯ್ ಉಡುಪಿ ನ್ಯೂಸ್) ಸಂತ್ರಸ್ತೆಯೋರ್ವ ಳನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ರನ್ನು ಎಸ್.ಐ.ಟಿ ಪೊಲೀಸರು ದೇವೇಗೌಡರ ನಿವಾಸದಲ್ಲಿ ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ನಂತರ ಎಸ್.ಐ.ಟಿ ಕಚೇರಿಯಲ್ಲಿ ತನಿಖೆ ಎದುರಿಸುತ್ತಿರುವ ರೇವಣ್ಣ ರನ್ನು ನಾಳೆ ಜಡ್ಜ್ ಅವರ ಮುಂದೆ ಹಾಜರುಪಡಿಸಲಿದ್ದಾರೆ ಎನ್ನಲಾಗಿದೆ.