ಕೊಲ್ಲೂರು ಪೊಲೀಸ್ ಠಾಣೆಯ ಪಿ.ಎಸ್.ಐ ಯವರಾದ ಸುಧಾರಾಣಿ.ಟಿ ಅವರಿಗೆ ದಿನಾಂಕ: 24/04/2024 ರಂದು ಜಡ್ಕಲ್ ಗ್ರಾಮದ ಹಾಲ್ಕಲ್ ಜಂಕ್ಷನ್ ಬಳಿಯ ಮಾನಸ ಹೊಟೇಲ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಗುಪ್ತ ಮಾಹಿತಿ ಬಂದಿದ್ದು ಕೂಡಲೇ ಪಿಎಸ್.ಐ ಯವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಸುಬ್ರಹ್ಮಣ್ಯ (42) ಉಪ್ಪುಂದ, ಬೈಂದೂರು ತಾಲೂಕು ಎಂಬವನನ್ನು ಬಂಧಿಸಿ ವಶಕ್ಕೆ ಪಡೆದು, ಆತನು ಮಾರಾಟ ಮಾಡಲು ಪರವಾನಿಗೆ ಇಲ್ಲದೇ ಇಟ್ಟುಕೊಂಡಿದ್ದ Original Choice Whisky 90 MLನ – 94 ಟೆಟ್ರಾ ಪ್ಯಾಕೆಟ್ ಗಳು & Mysore Lancer Whisky 90 ML-ನ 93 ಟೆಟ್ರಾ ಪ್ಯಾಕೆಟ್ ಗಳನ್ನು (ಒಟ್ಟು ಮದ್ಯದ ಪ್ರಮಾಣ 16.83 ಲೀಟರ್) ವಶಕ್ಕೆ ಪಡೆದುಕೊಂಡಿದ್ದು, ಮದ್ಯದ ಅಂದಾಜು ಮೌಲ್ಯ 7,480/-ರೂಪಾಯಿ ಆಗಿರುತ್ತದೆ ಎನ್ನಲಾಗಿದೆ. ಹಾಗೂ ಮದ್ಯ ಮಾರಾಟ ಮಾಡಿ ಸಂಗ್ರಹಿಸಿದ ಒಟ್ಟು ರೂ 800/- ಹಣವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ,
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಲಂ: 32, 34 KE ACT ನಂತೆ ಪ್ರಕರಣ ದಾಖಲಾಗಿದೆ.