Spread the love

ಕೋಟ: ದಿನಾಂಕ : 25-04-2024 (ಹಾಯ್ ಉಡುಪಿ ನ್ಯೂಸ್) ಹಳೆಯ ಕೇಸಿನ ವಿಚಾರದಲ್ಲಿ ರಸ್ತೆಯಲ್ಲಿ ಅಡ್ಡ ಗಟ್ಟಿ ಜೀವಬೆದರಿಕೆ ಹಾಕಿರುವ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ,ಕೋಟತಟ್ಟು ಗ್ರಾಮದ ನಿವಾಸಿ ವಿಶಾಲ (21) ಎಂಬವರು ದಿನಾಂಕ:24-04-2024 ರಂದು ತೆಕ್ಕಟ್ಟೆ ಗ್ರಾಮದ ನವಶಕ್ತಿ ಹಾಲ್‌ನ ಎದುರು ಸ್ನೇಹಿತರೊಂದಿಗೆ ಮಾತನಾಡುತ್ತಿರುವಾಗ ಆರೋಪಿಗಳಾದ ವಿಘ್ನೇಶ್‌ ಮತ್ತು ವಿಶ್ವನಾಥ ಎಂಬವರು  ಎರಡು ಮೋಟಾರ್‌ಸೈಕಲ್‌ನಲ್ಲಿ ಬಂದು ಈ ಹಿಂದೆ ಅವರುಗಳ ಮೇಲೆ ಕುಂದಾಪುರ ಠಾಣೆಯಲ್ಲಿ ಕೇಸು ದಾಖಲಾಗಿರುವ ವಿಚಾರದಲ್ಲಿ ತಗಾದೆ ತೆಗೆದು ವಿಶಾಲ ರವರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆಯಲ್ಲಿ  ಕಲಂ: 34̧1, 50̧4, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!