ಉಡುಪಿ: ದಿನಾಂಕ:24-04-2024(ಹಾಯ್ ಉಡುಪಿ ನ್ಯೂಸ್)
ದಿನಾಂಕ 18/04/2024ರಂದು ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ್ ರವರ ಕೊಲೆ ಪ್ರಕರಣವನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ಕುರಿತು ದಿನಾಂಕ 23/04/2024 ರಂದು ಬೆಳಿಗ್ಗೆ 10:00 ಗಂಟೆಗೆ ಉಡುಪಿ ತಾಲ್ಲೂಕು ಮೂಡನಿಡಂಬೂರು ಗ್ರಾಮದ ಜೋಡುಕಟ್ಟೆಯಲ್ಲಿ ಅಂದಾಜು 300 ಜನ ಯುವಕರು ಅಕ್ರಮ ಗುಂಪು ಸೇರಿ ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜ್ಯಾರಿಯಲ್ಲಿದ್ದು, ಪ್ರತಿಭಟನಾ ಜಾಥಾಕ್ಕೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ನಿರಾಕರಣೆಯಾಗಿದ್ದರೂ ಸಹ ಜೋಡುಕಟ್ಟೆಯಿಂದ ಕೆ.ಎಂ. ಮಾರ್ಗವಾಗಿ ಉಡುಪಿ ಸರ್ವೀಸ್ ಬಸ್ ನಿಲ್ದಾಣದವರೆಗೆ ಮೆರವಣಿಗೆ ಕೈಗೊಂಡು, ಸಾರ್ವಜನಿಕ ರಸ್ತೆಯಲ್ಲಿ ರಸ್ತೆಗೆ ಅಡ್ಡ ನಿಂತು ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗುವಂತೆ ಅಕ್ರಮ ಗುಂಪು ಕೂಡಿದ್ದರು ಎಂದು ಆರೋಪಿಸಲಾಗಿದೆ.
ಅಲ್ಲದೇ ಮಾನ್ಯ ಅಪರ ಜಿಲ್ಲಾ ದಂಡಾಧಿಕಾರಿಯವರ ಅಧಿಸೂಚನೆಯನ್ವಯ ಯಾವುದೇ ಪ್ರತಿಭಟನೆಗೆ ನಿರ್ಬಂಧಿತ ಸ್ಥಳವಾದ ಉಡುಪಿ ಸರ್ವೀಸ್ ಬಸ್ ನಿಲ್ದಾಣದ ಬಳಿಯ ಕ್ಲಾಕ್ ಟವರ್‌ನ ರಸ್ತೆಯ ಮೇಲೆ ಕುಳಿತು ಬೆಳಿಗ್ಗೆ 11:00 ಗಂಟೆಯವರೆಗೆ ರಸ್ತೆ ತಡೆ ಪ್ರತಿಭಟನೆ ನಡೆಸಿ, ಸಾರ್ವಜನಿಕರಿಗೆ, ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಡೆ ತಡೆಯನ್ನು ಉಂಟು ಮಾಡಿದ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಶ್ರೀವತ್ಸ್, ಗಣೇಶ್, ಅಜಿತ್ ಹರ್ಷಿತ್, ಮುರಳಿ ಮತ್ತು ಇತರರ ವಿರುದ್ಧ ಕುಮಾರ್ ನಾಯ್ಕ್ ವಿ (41), CDPO, ಉಡುಪಿ ತಾಲ್ಲೂಕು, FST-2, 120 UDUPI ಇವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 143, 147, 341, 290 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ .