
ಉಡುಪಿ: ದಿನಾಂಕ:14-04-2024(ಹಾಯ್ ಉಡುಪಿ ನ್ಯೂಸ್) ಅಜ್ಜರಕಾಡುವಿನಲ್ಲಿ ವಾಸವಾಗಿರುವ ತಂದೆ ಹಾಗೂ ಸೊಸೆ ಗೆ ನೆರೆ ಮನೆಯಲ್ಲಿ ವಾಸವಾಗಿರುವ ಮಗಳು ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದು ಇದೀಗ ಜೀವ ಬೆದರಿಕೆ ಹಾಕಿದ್ದಾಳೆ ಎಂದು ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ ಮಗಳು ತನಗೆ ತಂದೆ ಹಾಗೂ ಸೊಸೆ ಯಿಂದ ಜೀವ ಬೆದರಿಕೆ ಇದೆ ಎಂದು ಪ್ರತಿ ದೂರು ನೀಡಿದ್ದಾಳೆ.
ಉಡುಪಿ ತಾಲ್ಲೂಕು ಮೂಡನಿಡಂಬೂರು ಗ್ರಾಮದ ಅಜ್ಜರಕಾಡು ವಾರ್ಡಿನ ಹನುಮಾನ್ ಕಾಲೋನಿ ರಸ್ತೆಯಲ್ಲಿ ವಾಸವಾಗಿರುವ ಜಾನ್ ಫೆರ್ನಾಂಡಿಸ್ (77) ಅವರ ಸೊಸೆ ಲೀನಾ ಫೆರ್ನಾಂಡಿಸ್ ಅವರಿಗೆ ದಿನಾಂಕ 12/04/2024 ರಂದು ರಾತ್ರಿ ಅನಿತಾ ಫೆರ್ನಾಂಡಿಸ್ ಎಂಬವರು ಅವಾಚ್ಯ ಶಬ್ಧಗಳಿಂದ ಭೈಯ್ಯುತ್ತಿದ್ದದನ್ನು ಕಂಡು ಜಾನ್ ಫೆರ್ನಾಂಡಿಸ್ ಅವರು ಸಹಿಸದೇ ವಿಚಾರಿಸಲು ಹೋದಾಗ ,ಅನಿತಾ ಫೆರ್ನಾಂಡಿಸ್ ರವರು ಜಾನ್ ಫೆರ್ನಾಂಡಿಸ್ ಅವರಿಗೆ ಕತ್ತಿಯಿಂದ ಕಡಿಯಲು ಬಂದಿದ್ದು , ಅದನ್ನು ತಡೆಯಲು ಹೋದ ಲೀನಾ ಫೆರ್ನಾಂಡಿಸ್ ರವರ ಎಡ ಕೈಯನ್ನು ಅನಿತಾ ಫೆರ್ನಾಂಡಿಸ್ ಳು ಬಲವಾಗಿ ಕಚ್ಚಿ ಕೈಯಿಂದ ಹಲ್ಲೆ ನಡೆಸಿ ,ಗಾಯ ಮಾಡಿ ನಂತರ ಕೊಲೆ ಬೆದರಿಕೆ ಹಾಕಿದ್ದಾಳೆ ಎಂದು ಜಾನ್ ಫೆರ್ನಾಂಡಿಸ್ ರವರು ಪೊಲೀಸರಿಗೆ ದೂರು ನೀಡಿದ್ದಾರೆ.
- ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 323,324,504,506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
- ಅನಿತಾ ಫೆರ್ನಾಂಡೀಸ್ ಈ ಹಿಂದೆ ಹಲವು ಬಾರಿ ಲೀನಾ ಫೆರ್ನಾಂಡೀಸ್ ಅವರಿಗೆ ಹಾಗೂ ಅವರ ಮನೆಯವರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದು, ಲೀನಾ ಫೆರ್ನಾಂಡಿಸ್ ಈ ಬಗ್ಗೆ ಈ ಹಿಂದೆಯೂ ಅನಿತಾ ಫೆರ್ನಾಂಡಿಸ್ ಳ ವಿರುದ್ಧ ದೂರು ಸಲ್ಲಿಸಿ ವಿಚಾರಣೆ ಆಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
- ದಿನಾಂಕ 12/04/2024 ರಂದು ರಾತ್ರಿ ಅನಿತಾ ಫೆರ್ನಾಂಡಿಸ್ ದಿನ ನಿತ್ಯದಂತೆ ಜಗಳವಾಡಿ ಅತೀ ಕೆಟ್ಟವಾದ ಅವಾಚ್ಯ ಶಬ್ದಗಳನ್ನು ಬಳಸಿ ಲೀನಾ ಫೆರ್ನಾಂಡಿಸ್ ರನ್ನು ಬೈದಿದ್ದು, ಇದನ್ನು ಸಹಿಸದ ಲೀನಾ ಫೆರ್ನಾಂಡಿಸ್ ರ ಮಾವ / ಅನಿತಾ ಫೆರ್ನಾಂಡಿಸ್ ಳ ತಂದೆ ಜಾನ್ ಫೆರ್ನಾಂಡೀಸ್ ಯಾಕೆ ಹೀಗೆ ಬಯ್ಯುತ್ತೀಯಾ ಎಂದು ಅನಿತಾ ಫೆರ್ನಾಂಡಿಸ್ ಳನ್ನು ವಿಚಾರಿಸಲು ಹೋದಾಗ ಅನಿತಾ ಫೆರ್ನಾಂಡಿಸ್ ಳು ಅವರಿಗೆ ಕತ್ತಿಯನ್ನು ಹಿಡಿದು ಕಡಿಯಲು ಬಂದಿದ್ದು, ಆಗ ಲೀನಾ ಫೆರ್ನಾಂಡಿಸ್ ತಡೆಯಲು ಹೋಗಿ ಅನಿತಾ ಫೆರ್ನಾಂಡಿಸ್ ಳ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಆಗ ಆಕೆ ಲೀನಾ ಫೆರ್ನಾಂಡಿಸ್ ರ ಎಡ ಕೈಯನ್ನು ಬಲವಾಗಿ ಕಚ್ಚಿ ರಕ್ತ ಬರುವಂತೆ ಗಾಯ ಉಂಟು ಮಾಡಿರುತ್ತಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಅನಿತಾ ಫೆರ್ನಾಂಡಿಸ್ ಳ ಅತೀರೇಕದ ಹಾಗೂ ಕೋಪದ ವರ್ತನೆಯಿಂದ ಲೀನಾ ಫೆರ್ನಾಂಡಿಸ್ ಹಾಗೂ ಅವರ ಮಾವ ಮಾನಸಿಕವಾಗಿ ನೊಂದು ಜರ್ಜರಿತರಾಗಿದ್ದಾರೆ. ಅನಿತಾ ಫೆರ್ನಾಂಡಿಸ್ ಳು ಲೀನಾ ಫೆರ್ನಾಂಡಿಸ್ ರಿಗೆ ಕೂಡ ಜೀವ ಬೆದರಿಕೆ ನೀಡಿದ್ದಲ್ಲದೇ ಮನೆಯ ಸೊತ್ತುಗಳನ್ನು ಹಾಳು ಮಾಡಿ ಕೆಡವಿ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ.
- ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
- ದಿನಾಂಕ 12/04/2024 ರಂದು ರಾತ್ರಿ ಅಪಾದಿತರಾಧ 1) ಲೀನಾ ಫೆರ್ನಾಂಡೀಸ್, 2) ಜಾನ್‌ಫೆರ್ನಾಂಡೀಸ್, 3) ಒರ್ವ ಮಹಿಳೆ, 4) ಲೀನಾಳ ಮಕ್ಕಳು ಇವರೆಲ್ಲಾ ಅನಿತಾ ಫೆರ್ನಾಂಡಿಸ್ (52) ಆವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಆಗ ಅನಿತಾ ಫೆರ್ನಾಂಡಿಸ್ ಅವರು ಯಾಕೆ ಹಾಗೆ ಬೈದಿರುವುದು ಎಂದು ಕೇಳಿದಾಗ ಎಲ್ಲಾ ಆರೋಪಿಗಳು ಅನಿತಾ ಫೆರ್ನಾಂಡಿಸ್ ರವರ ಮನೆಯೊಳಗೆ ತಲವಾರು, ದೊಣ್ಣೆ ಹಿಡಿದು ಅಕ್ರಮ ಪ್ರವೇಶ ಮಾಡಿ ಅನಿತಾ ಫೆರ್ನಾಂಡಿಸ್ ಅವರನ್ನು ಕೊಲ್ಲಲು ಬಂದು ಅನಿತಾ ರವರ ಮನೆ ಹಾಗೂ 2 ಕುರ್ಚಿ ಹಾಗೂ 2 ಬಾಗಿಲು, ಸ್ವಿಚ್ ಬೋರ್ಡ್ ಗೆ ಹಾನಿ ಮಾಡಿ ಅನಿತಾ ಅವರಿಗೆ ಹಲ್ಲೆ ಮಾಡಿ ಅವರ ಗಂಡನಿಗೆ ಕಾಲಿನ ಮೇಲೆ ಸ್ಕೂಟಿಯನ್ನು ದೂಡಿ ಗಾಯಗೊಳಿಸಿರುತ್ತಾರೆ ಹಾಗೂ ಲೀನಾ ಫೆರ್ನಾಂಡಿಸ್ ದಿನಾಲು ಅನಿತಾ ಫೆರ್ನಾಂಡಿಸ್ ರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಿಂಸಿಸುತ್ತಿದ್ದು, ಇದಕ್ಕೆಲ್ಲ ಮುಖ್ಯ ಕಾರಣ ಅನಿತಾ ಫೆರ್ನಾಂಡಿಸ್ ಅವರ ತಂದೆ ಕೊಟ್ಟ ಆಸ್ತಿ ಮರಳಿ ಸಿಗಬೇಕೆಂದು ಉದ್ದೇಶವಾಗಿದೆ ಅಲ್ಲದೇ ಲೀನಾ ಫೆರ್ನಾಂಡಿಸ್ ಳು ಅನಿತಾ ಫೆರ್ನಾಂಡಿಸ್ ರ ಮನೆಯ ಕಪಾಟಿನಲ್ಲಿದ್ದ ತನ್ನ ಮಗನ ಹಾಗೂ ತಾಯಿಯ ಚಿನ್ನವನ್ನು ಕದ್ದು ತೆಗೆದುಕೊಂಡು ಹೋಗಿರುತ್ತಾಳೆ ಎಂದು ಪೊಲೀಸರಿಗೆ ಪ್ರತಿ ದೂರು ನೀಡಿದ್ದಾರೆ.
- ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 448, 324, 427, 504, 506, 380 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.