Spread the love

ಬೆಂಗಳೂರು: ದಿನಾಂಕ:31-03-2024(ಹಾಯ್ ಉಡುಪಿ ನ್ಯೂಸ್) ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಇ.ಡಿ.ಪ್ರಕರಣದಲ್ಲಿ ಆರೋಪಿ ಯಾಗಿದ್ದು ಅವರು ನಾಮಪತ್ರ ಸಲ್ಲಿಸುವ ಮೊದಲು ಅವರ ಮೇಲೆ ಕ್ರಮ ಕೈಗೊಳ್ಳ ಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.

2010 ರಲ್ಲಿ ನಡೆದ 350 ಎಕರೆ ಭೂಮಿ ಯನ್ನು ಡಿನೋಟಿಫಿಕೇಷನ್ ಮಾಡಿರುವ ಹಗರಣದಲ್ಲಿ 48 ಕೋಟಿ ಹಣ ವರ್ಗಾವಣೆ ಆರೋಪವಿದೆ. ಇದಲ್ಲದೆ ಶೋಭಾ ಕರಂದ್ಲಾಜೆ ಮೇಲೆ 24 ಗಂಭೀರ ಆರೋಪಗಳಿದ್ದರೂ ಅವರನ್ನು ಕೇಂದ್ರ ದಲ್ಲಿ ಮಂತ್ರಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಹಣ ಆಕ್ರಮ ವರ್ಗಾವಣೆಯ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ  ಈ.ಡಿ ಯಾಕೆ ನೋಟಿಸ್ ಕೊಟ್ಟಿಲ್ಲ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಪ್ರಶ್ನಿಸಿದ್ದಾರೆ.

error: No Copying!