ಕುಂದಾಪುರ: ದಿನಾಂಕ:31-03-2024(ಹಾಯ್ ಉಡುಪಿ ನ್ಯೂಸ್) ಬೈಂದೂರು ವಿಧಾನಸಭಾ ಕ್ಷೇತ್ರದ ಹೆಮ್ಮಾಡಿ ಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.
118 ನೇಯ ಬೈಂದೂರು ವಿಧಾನಸಭಾ ಕ್ಷೇತ್ರದ ಪ್ಲೈಯಿಂಗ್ ಸ್ಕ್ವಾಡ್ ನ ಮುಖ್ಯಸ್ಥರಾದ ಕಿರಣ್ ವಡ್ತ (46) ಅವರು ಪ್ರಸ್ತುತ 118 ನೇಯ ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣಾ ನೀತಿ ಸಂಹಿತೆಯ ಪ್ಲೈಯಿಂಗ್ ಸ್ಕ್ವಾಡ್ ನ ಅಧಿಕಾರಿಯಾಗಿದ್ದು, ದಿನಾಂಕ 30-03-2024 ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಬೈಂದೂರು ವಿಧಾನ ಸಭಾ ಕ್ಷೇತ್ರದ ಹೆಮ್ಮಾಡಿ ಗ್ರಾಮದಲ್ಲಿರುವ ಜಯಶ್ರೀ ಸಭಾಭವನದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಪರವಾಗಿ ವೇದಿಕೆಯ ಕಾರ್ಯಕ್ರಮವನ್ನು ಆಪಾದಿತರಾದ ರವಿಚಂದ್ರ ಕೆ ಎಂಬವರು ಬೆಳಿಗ್ಗೆ 10:30 ಗಂಟೆಯಿಂದ ಆಯೋಜಿಸಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಸುಮಾರು 300 ಜನರು ಭಾಗವಹಿಸಿದ್ದು ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗಿಯಾಗಿದ್ದರು ಎಂದು ದೂರಿದ್ದಾರೆ.
ಈ ಕಾರ್ಯಕ್ರಮವು ಮುಗಿದ ನಂತರ ಸಭೆಯಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಚುನಾವಣೆ ನೀತಿ ಸಂಹಿತೆಗೆ ವಿರುದ್ದವಾಗಿ ಚುನಾವಣಾ ಅಧಿಕಾರಿಯವರ ಯಾವುದೇ ಪೂರ್ವ ಅನುಮತಿ ಪಡೆಯದೆ ಊಟದ ವ್ಯವಸ್ಥೆಯನ್ನು ಮಾಡಿ, ಮತದಾನದ ಬಗ್ಗೆ ಪ್ರಭಾವ ಬೀರಿ, ಚುನಾವಣೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿರುತ್ತಾರೆ ಎನ್ನಲಾಗಿದೆ .ಅಲ್ಲದೇ ಈ ಕೃತ್ಯದಲ್ಲಿ ಜಯಶ್ರೀ ಸಭಾ ಭವನದ ಮೇಲ್ವಿಚಾರಕರಾದ ಹೆಮ್ಮಾಡಿಯವರು ಕೂಡ ಭಾಗಿಯಾಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 171(B)IPC AND 123(A) R.P ACT ನಂತೆ ಪ್ರಕರಣ ದಾಖಲಾಗಿದೆ.