Spread the love

ಅಜೆಕಾರು: ದಿನಾಂಕ:  30/03/2024 (ಹಾಯ್ ಉಡುಪಿ ನ್ಯೂಸ್) ಕೆರ್ವಾಸೆ ಗ್ರಾಮದ ಬೆರ್ಮರ ಗುಂಡಿ ಎಂಬಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದ್ದಲ್ಲಿಗೆ ಅಜೆಕಾರು ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ರವಿ ಬಿಕೆ ಅವರು ದಾಳಿ ನಡೆಸಿದ್ದಾರೆ.

ಅಜೆಕಾರು ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ರವಿ ಬಿಕೆ ಅವರಿಗೆ ದಿನಾಂಕ: 29-03-2024 ರಂದು ಸಾರ್ವಜನಿಕರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಕೆರ್ವಾಸೆ ಗ್ರಾಮದ ಬೆರ್ಮರ ಗುಂಡಿ ಎಂಬಲ್ಲಿ ಸರಕಾರಿ ಜಾಗದಲ್ಲಿರುವ ಹಪ್ಪನಡ್ಕ ಹಳ್ಳದ ದಡದಲ್ಲಿ ಯಾರೋ ಆರೋಪಿತರು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸರಕಾರಕ್ಕೆ ಸೇರಿದ ಮರಳನ್ನು ಹಳ್ಳದಿಂದ ಕಳವು ಮಾಡಿ ಸ್ವಂತ ಲಾಭಕ್ಕೋಸ್ಕರ ಸಾಗಾಟ ಮಾಡಲು ಸಂಗ್ರಹಿಸಿ ಇಟ್ಟಿದ್ದ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ.

ದಾಳಿ ನಡೆಸಿದಾಗ ಸ್ಥಳದಲ್ಲಿದ್ದ 1 ಯುನಿಟ್‌ಗಳಷ್ಟು ಮರಳು, ಕಬ್ಬಿಣದ ಹಾರೆ-3, ರಬ್ಬರ್ ಬುಟ್ಟಿ-3, ಕಬ್ಬಿಣದ ಬಕೆಟ್‌-2 ಇವುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ  ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿದೆ..

error: No Copying!