Spread the love

ಉಡುಪಿ: ದಿನಾಂಕ 28/03/2024(ಹಾಯ್ ಉಡುಪಿ ನ್ಯೂಸ್) ಅಪರಾಧ ಪ್ರಕರಣ ವೊಂದರಲ್ಲಿ ಭಾಗಿಯಾದ ವಾಹನ ಮಾಲಕನೋರ್ವ ವಿಚಾರಣೆ ನಡೆಸಿದ ಪೊಲೀಸ್  ಹೆಡ್‌ ಕಾನ್ಸಟೇಬಲ್‌ಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮರಿಗೌಡ ಅವರು ದಿನಾಂಕ :24-03-2024ರಂದು ರಾತ್ರಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿರುವಾಗ ಉಡುಪಿ ಸಿಟಿ ಬಸ್ ನಿಲ್ದಾಣದ ಕಡೆಯಿಂದ ಕಲ್ಸಂಕ ಕಡೆ ಹೋಗುವ ಓಮ್ನಿ ಕಾರೊಂದರಲ್ಲಿ ಸುಮಾರು 4 ಜನರು ಇದ್ದು ಅವರುಗಳು ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಇರುವ ರಾಧಾ ಮೆಡಿಕಲ್ ನ ಎದುರು ರಸ್ತೆ ಬದಿಯಲ್ಲಿ ಮಲಗಿರುವ ಕೂಲಿ ಕಾಮಿ೯ಕರ ಮೇಲೆ ಬಿಯರ್ ಬಾಟಲಿ ಹಾಗೂ ರಾಡ್ ಗಳನ್ನು ಬಿಸಾಡಿಕೊಂಡು ಇದೇ ವಠಾರದಲ್ಲಿ 2-3 ಭಾರೀ ಸುತ್ತಾಡುತ್ತಿರುವುದಾಗಿ ಸಾರ್ವಜನಿಕ ರಿಂದ ಬಂದ ಮಾಹಿತಿ ಬಗ್ಗೆ ಕೂಡಲೇ ಓಮ್ನಿ ವಾಹನ ಸಂಖ್ಯೆ KA-20-D-5219 ನೇದರ ಆರ್.ಸಿ ಮಾಲಕರನ್ನು ಗುರುತಿಸಿ ಪೋನ್ ಮಾಡಿ ವಿಚಾರಿಸಿರುತ್ತಾರೆ ಎನ್ನಲಾಗಿದೆ.

ಇದೇ ವಿಚಾರದಲ್ಲಿ ದಿನಾಂಕ 25/03/2024 ರಂದು  ಆರೋಪಿ ಆದಮ್ ಎಂಬವ ಹೆಚ್.ಸಿ  ಮರಿಗೌಡ ರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದು, ನಂತರ ಇನ್ನೊಬ್ಬ ಆರೋಪಿ ಓಮ್ನಿ ಮಾಲಕ ಅದೇ ಪೋನ್ನಲ್ಲಿ ಮಾತನಾಡಿ ಬೆದರಿಕೆ ಹಾಕಿದ್ದು, ದಿನಾಂಕ 25/03/2024 ರಂದು ಆದಮ್ ನು ಪುನ: ದೂರವಾಣಿ ಕರೆಮಾಡಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.ದಿನಾಂಕ 26/03/2024 ರಂದು ಆರೋಪಿ ಅದಮ್‌ ನು ಪುನಃ ಕರೆ ಮಾಡಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಹೆಚ್.ಸಿ. ಮರಿಗೌಡ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!