ನನಗೆ,
ಬಿಪಿ ಚೆಕ್ ಮಾಡಿದರು – 80/120 ಪಕ್ಕಾ,
ಶುಗರ್ ಚೆಕ್ ಮಾಡಿದರು – ನಾರ್ಮಲ್,
ಕೊಲೆಸ್ಟ್ರಾಲ್ – very good,
ಥೈರಾಯ್ಡ್ – Excellent,
pulse – Perfect,
ಹಿಮೋಗ್ಲೋಬಿನ್ – Super,
Heart – First class,
Total body – No problem,
Next……………
ಪ್ರೀತಿ ಚೆಕ್ ಮಾಡಿದರು – ಸ್ವಲ್ಪ ಜಾಸ್ತಿ,
ತ್ಯಾಗ ಚೆಕ್ ಮಾಡಿದರು – ಸ್ವಲ್ಪ ಕಡಿಮೆ,
ಕೋಪ – ತುಂಬಾ ಜಾಸ್ತಿ,
ತಾಳ್ಮೆ – Abnormal,
ಅಹಂಕಾರ – Detected,
ಸಹಕಾರ – ಸಾಧಾರಣ,
ಬುದ್ದಿ – ಸ್ವಲ್ಪ ಕಡಿಮೆ,
Next,…….
ನೋವು,….
ಅದು ಯಾವುದಕ್ಕೂ ಲೆಕ್ಕಕ್ಕೇ ಸಿಗಲಿಲ್ಲ,
ಅದು ಯಾವ ಅಳತೆಗೂ ನಿಲುಕಲಿಲ್ಲ,
ಅದು ಯಾರಿಗೂ ಅರ್ಥವಾಗಲೇ ಇಲ್ಲ,
ಅದನ್ನು ಅಳೆಯುವ ಮಾಪನವೂ ಇಲ್ಲ,
ಬದುಕೇ ನೋವಾಗಿರುವಾಗ ಅಳೆಯುವುದೇನನ್ನು ,…..
ಆದರೂ ಬದುಕುತ್ತಿದ್ದೇನೆ,
ನೋವುಗಳನ್ನು ನುಂಗಿ,
ಬದುಕುತ್ತಲೇ ಇರುತ್ತೇನೆ,
ಉಸಿರು ನಿಲ್ಲುವವರೆಗೂ,
ನಾಗರಿಕ ಸಮಾಜದ ನಿರೀಕ್ಷೆಯಲ್ಲಿ……..
ಪ್ರಬುದ್ದ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068…….