Spread the love
  • ಮಲ್ಪೆ: ದಿನಾಂಕ:20-03-2024(ಹಾಯ್ ಉಡುಪಿ ನ್ಯೂಸ್) ಮೂಡುತೋನ್ಸೆ ಗ್ರಾಮದ ವಿವಾಹಿತ ಮಹಿಳೆಯೋರ್ವರಿಗೆ ಗಂಡ ದೈಹಿಕ ಮಾನಸಿಕ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  • ಮೂಡುತೋನ್ಸೆ ಗ್ರಾಮದ, ಮಲ್ಪೆ ನಿವಾಸಿ ಶ್ವೇತಾ (30) ಎಂಬವರು ತನ್ನ ಗಂಡ ಗುರುರಾಜ್‌ ಹಾಗೂ ಮಗುವಿನೊಂದಿಗೆ ಗಂಡನ ಮನೆಯಲ್ಲಿ ವಾಸ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
  • ಶ್ವೇತಾ ರವರ ಗಂಡ ಗುರುರಾಜನು ದೈಹಿಕ ಮತ್ತು ಮಾನಸಿಕ ತೊಂದರೆ ಕೊಡುತಿದ್ದು ಮಗುವಿನ ಮುಂದೆ ಶ್ವೇತಾ ರವರಿಗೆ ಹೊಡೆಯುತಿದ್ದು, ದಿನಾಂಕ 19/03/2024 ರಂದು ಮಗುವಿನ ಆಧಾರ ಕಾರ್ಡ್‌ ಮಾಡಿಸುವ ಬಗ್ಗೆ ತನ್ನ ತಾಯಿ ಮನೆಗೆ ಜನನ ಪ್ರಮಾಣ ಪತ್ರ ತರಲು ಹೋಗುವುದಾಗಿ ಗಂಡನ ಬಳಿ ಹೇಳಿದಾಗ ಮಗುವಿನ ಮುಂದೆ ಹೊಡೆದಿರುತ್ತಾನೆ ಎಂದು ದೂರಿದ್ದಾರೆ.
  • ಶ್ವೇತಾ ರವರು ತನ್ನ ತಾಯಿ ಮನೆಯಾದ ನೇಜಾರಿಗೆ  ಬಂದಾಗ ಸಂಜೆ ಹೊತ್ತಿಗೆ ಗಂಡ ಗುರುರಾಜ್‌ ಮನೆಗೆ ಬಂದು ಮಗುವನ್ನು ಕೊಡು ಎಂದು ಹೇಳಿದಾಗ ಮಗುವನ್ನು ಕೊಡದಿದ್ದದಕ್ಕೆ ಶ್ವೇತಾ ರವರ ತಾಯಿ ಲಲಿತಾರವರಿಗೆ ಬಾಯಿಗೆ ಬಂದ ಹಾಗೆ ಬೈದು ಹೊಡೆಯಲು ಬಂದಾಗ ಶ್ವೇತಾ ರವರು ಪೊಲೀಸರಿಗೆ ಪೋನ್ ಮಾಡುತ್ತೇನೆ ಎಂದಾಗ ಗಂಡ ಗುರುರಾಜನು ಮೊಬೈಲ್‌ ನಿಂದ ಶ್ವೇತಾ ರವರ ತಲೆಗೆ ಜಜ್ಜಿ ಹೊಡೆದಿರುತ್ತಾನೆ ಎನ್ನಲಾಗಿದೆ.
  • ಆ ಸಮಯ ತಡೆಯಲು ಬಂದ ಅಕ್ಕಂದಿರಾದ ವಿನುತಾ ಮತ್ತು ಸುಲತಾ ರವರಿಗೂ ಹೊಡೆದಿರುತ್ತಾನೆ ಎನ್ನಲಾಗಿದೆ. ಮೊಬೈಲ್‌ ನಿಂದ ತಲೆಗೆ ಹೊಡೆದ ಪರಿಣಾಮ ತಲೆಯ ಎಡಭಾಗಕ್ಕೆ ರಕ್ತ ಬರುವಂತೆ ಗಾಯವಾಗಿದೆ ಎಂದು ಶ್ವೇತಾ ರವರು ಪೊಲೀಸರಿಗೆ ದೂರು ನೀಡಿದ್ದಾರೆ .
  • ಶ್ವೇತಾ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ: 498(ಎ), 324, 504 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
error: No Copying!