- ಬೈಂದೂರು: ದಿನಾಂಕ 29/02/2024 (ಹಾಯ್ ಉಡುಪಿ ನ್ಯೂಸ್) ಯಡ್ತರೆ ಗ್ರಾಮದಲ್ಲಿ ಅಕ್ರಮ ಕೆಂಪು ಕಲ್ಲಿನ ಗಣಿಗಾರಿಕೆ ನಡೆಸುತ್ತಿದ್ದ ಈರ್ವರನ್ನು ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ್ ಬಿಎನ್ ಅವರು ಬಂಧಿಸಿದ್ದಾರೆ.
- ಬೈಂದೂರು ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ್ ಬಿಎನ್ ಅವರು ದಿನಾಂಕ :28-02-2024ರಂದು ಸಿಬ್ಬಂದಿಯವರೊಂದಿಗೆ ಬೈಂದೂರು ಠಾಣಾ ಸರಹದ್ದಿನ ಯಡ್ತರೆ ಗ್ರಾಮದಲ್ಲಿ ರೌಂಡ್ಸ್ ನಲ್ಲಿದ್ದು, ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾಗ ಯಡ್ತರೆ ಗ್ರಾಮದ ಊದೂರು ಎಂಬಲ್ಲಿ ಸರಕಾರಿ ಜಾಗದಲ್ಲಿ ಅಕ್ರಮ ಕೆಂಪುಕಲ್ಲು ಗಣಿಕಾರಿಕೆ ನಡೆಯುತ್ತಿದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.
- ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದಾಗ ಕಲ್ಲುಕೋರೆಯಲ್ಲಿ, ಕಲ್ಲು ಕಟ್ ಮಾಡುವ ಚಿಕ್ಕ ಟಿಲ್ಲರ್ ಹಾಗೂ KA 20 C 2107 ಟಿಪ್ಪರ್ ನಿಂತಿದ್ದು ಅಲ್ಲಿದ್ದ ಇಬ್ಬರು ವ್ಯಕ್ತಿಗಳ ಹೆಸರು ವಿಳಾಸ ವಿಚಾರಿಸಿದಾಗ ಅಣ್ಣಪ್ಪ , ತಗ್ಗರ್ಸೆ ಗ್ರಾಮ ಬೈಂದೂರು ತಾಲೂಕು ಎಂದು ತಿಳಿಸಿದ್ದು, ಆತನು ತಾನು ಯಾವುದೇ ಪರವಾನಿಗೆ ಇಲ್ಲದೇ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವುದಾಗಿ ಹೇಳಿದನು ಎನ್ನಲಾಗಿದೆ.
- ಪೊಲೀಸರು ಸ್ಥಳ ಪರಿಶೀಲಿಸಿದಾಗ ಸುಮಾರು 5 ಸೆಂಟ್ಸ್ ಜಾಗದಲ್ಲಿ ಸುಮಾರು 7 ಅಡಿ ಆಳದಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದಿದೆ. KA 20 C 2107ನೇ ಟಿಪ್ಪರ್ ನಲ್ಲಿ 200 ಕೆಂಪು ಕಲ್ಲುಗಳನ್ನು ತುಂಬಿಸಿದ್ದು, ಚಾಲಕನ ಹೆಸರು ವಿಳಾಸ ವಿಚಾರಿಸಿದಾಗ ರಾಘವೇಂದ್ರ ,ಉಪ್ಪುಂದ ಗ್ರಾಮ ಬೈಂದೂರು ಎಂದು ತಿಳಿಸಿದನು ಎನ್ನಲಾಗಿದೆ. ಅವರ ಬಳಿ ಕೆಂಪು ಕಲ್ಲುಗಳನ್ನು ಗಣೆಗಾರಿಕೆ ಮಾಡಲು ಪರವಾನಿಗೆ ಬಗ್ಗೆ ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲವೆಂದು ಹೇಳಿದರು ಎನ್ನಲಾಗಿದೆ.
- ಚಿಕ್ಕ ಟಿಲ್ಲರ್ ಹಾಗೂ KA 20 C 2107 ಟಿಪ್ಪರ್ ನ್ನು ಪರಿಶೀಲಿಸಿದ್ದು, ಚಿಕ್ಕ ಟಿಲ್ಲರ್ ನ ಅಂದಾಜು ಮೌಲ್ಯ 35,000/- ರೂಪಾಯಿ, KA 20 C 2107 ಟಿಪ್ಪರ್ ನ ಅಂದಾಜು ಮೌಲ್ಯ 5,00,000/- ರೂಪಾಯಿ ಹಾಗೂ ಕೆಂಪು ಕಲ್ಲಿನ ಬೆಲೆ ಅಂದಾಜು ಮೌಲ್ಯ 4,000/- ರೂಪಾಯಿ ಆಗಿರುತ್ತದೆ ಎನ್ನಲಾಗಿದೆ. ಒಟ್ಟು ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ರೂ 5,39,000/- ಆಗಿರುತ್ತದೆ. ಸ್ವತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿರುತ್ತಾರೆ, ಆಪಾದಿತರಾದ ಅಣ್ಣಪ್ಪ ಮತ್ತು ರಾಘವೇಂದ್ರ ಎಂಬವರು ಯಾವುದೇ ಪರವಾನಿಗೆಯನ್ನು ಪಡೆದುಕೊಳ್ಳದೇ ಭೂಮಿಯ ಆಳದಿಂದ ಕೆಂಪುಕಲ್ಲು ತೆಗೆದು ಮಾರಾಟ ಮಾಡುವ ಉದ್ದೇಶದಿಂದ ಕಳವು ಮಾಡಿ ಗಣಿಕಾರಿಕೆ ನಡೆಸುತ್ತಿರುವರೆಂದು ದೂರು ದಾಖಲಾಗಿದೆ.
- ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 379 ಐಪಿಸಿ ಮತ್ತು ಕಲಂ: 4, 21 MMDR ACT ನಂತೆ ಪ್ರಕರಣ ದಾಖಲಾಗಿದೆ.