Spread the love

ಮಲ್ಪೆ: ದಿನಾಂಕ: 28-02-2024(ಹಾಯ್ ಉಡುಪಿ ನ್ಯೂಸ್) ಮಲ್ಪೆ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟನ್ನು ಅಪಹರಣಕಾರರು ಅಪಹರಿಸಿ  ಮೀನುಗಾರರನ್ನು ಬಂಧನದಲ್ಲಿರಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

     ಉಡುಪಿ , ಮಲ್ಪೆ , ಕೊಡವೂರು ಗ್ರಾಮದ ನಿವಾಸಿ ಚೇತನ್ ಸಾಲಿಯಾನ್ (42) ಎಂಬವರು ರು IND KA 02 MM 5572 ನಂಬ್ರದ ಕೃಷ್ಣನಂದನ ಎಂಬ ಲೈಲಾನ್‌ ಬೋಟ್‌ ಮಾಲಕರಾಗಿದ್ದು, ಅದರಲ್ಲಿ ದಿನಾಂಕ 19/02/2024 ರಂದು ಆಳ ಸಮುದ್ರಕ್ಕೆ ಮೀನು ಹಿಡಿಯಲು 1) ನಾಗರಾಜ್‌ ಹರಿಕಾಂತ  2) ನಾಗರಾಜ್‌ ಹೆಚ್.‌ ಹರಿಕಾಂತ  3) ಅರುಣ್‌ ಹರಿಕಾಂತ ಅಂಕೋಲ 4) ಅಶೋಕ ಕುಮಟ 5) ಕಾರ್ತಿಕ್‌ ಹರಿಕಾಂತ ಮಂಕಿ 6) ಚಂದ್ರಕಾಂತ ಹರಿಕಾಂತ ಉಪ್ಪುಂದ 7) ಸುಬ್ರಮಣ್ಯ ಖಾರ್ವಿ ಎಂಬವರು ತೆರಳಿರುತ್ತಾರೆ ಎನ್ನಲಾಗಿದೆ. 

      ದಿನಾಂಕ 27/02/2024 ರಂದು ಬೆಳಗ್ಗೆ 6.00 ಗಂಟೆಗೆ ಚೇತನ್ ಸಾಲಿಯಾನ್ ರಿಗೆ ನೌಕರ  ನಾಗರಾಜ್‌ ಹರಿಕಾಂತ ಎಂಬವರು ಪೋನ್‌ ಕರೆ ಮಾಡಿ ದಿನಾಂಕ  27/02/2024 ರ ರಾತ್ರಿ ವೆಳೆಗೆ ಮೀನುಗಾರಿಕೆ ಮುಗಿಸಿ ಲಕ್ಷಾಂತರ ರೂಪಾಯಿ ಮೌಲ್ಯದ  ಮೀನು ತುಂಬಿಸಿಕೊಂಡು  ಮಲ್ಪೆ ಕಡೆಗೆ ಬರುತ್ತಿರುವಾಗ ನಮ್ಮ ಬೋಟ್‌ ನ ಬಲೆ  ಫ್ಯಾನ್‌ ಗೆ  ಬಿದ್ದ ಕಾರಣ ಬೋಟ್‌ ಬಂದ್‌ ಆಗಿ ನಿಂತಿದ್ದು, ಈ ಸಮಯದಲ್ಲಿ ಸುಮಾರು 25 ಜನ ಅಪಹರಣಕಾರರು ಓಮ್ಮಿಂದೊಮ್ಮೆಲೆ ಅಕ್ರಮಣ ಮಾಡಿ ಬೋಟ್‌ ನ್ನು ತೀರಕ್ಕೆ ಎಳೆದುಕೊಂಡು ಹೋಗಿ ನಮ್ಮನ್ನು ಅಪಹರಿಸಿ ಬೋಟ್‌  ನಲ್ಲಿದ್ದ  ಸುಮಾರು 8 ಲಕ್ಷ ಮೌಲ್ಯದ ಮೀನು ಮತ್ತು ಬೋಟ್‌ ಗೆ ತುಂಬಿಸಿದ 5,76,700/- ಮೌಲ್ಯದ  7,500 ಲೀಟರ್‌ ಡೀಸೆಲ್‌ ದೋಚಿರುತ್ತಾರೆ. ಇಷ್ಟೇ ಅಲ್ಲದೇ ಬೋಟ್‌ ನಲ್ಲಿದ್ದ  7 ಜನರನ್ನು ಒತ್ತೆಯಾಳಾಗಿ ಇರಿಸಿ ಕೊಂಡಿರುತ್ತಾರೆ ಎಂದು ತಿಳಿಸಿದಂತೆ ಚೇತನ್ ಸಾಲಿಯಾನ್ ರು ಉಳಿದ ಮೀನುಗಾರರಿಗೆ ಫೋನ್‌ ಕರೆ ಮಾಡಿದಾಗ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಆಗಿರುತ್ತದೆ ಎಂದಿದ್ದಾರೆ. 

     ಚೇತನ್ ಸಾಲಿಯಾನ್ ರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿ, ಮೀನುಗಾರರನ್ನು ಅಪರಿಚಿತ ಅಪಹರಣಕಾರರು ಬಂಧನದಲ್ಲಿರಿಸಿ ಅವರಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಚೇತನ್ ಸಾಲಿಯಾನ್ ರವರು ಪೊಲೀಸರಿಗೆ ದೂರು ನೀಡಿದ್ದಾರೆ.

     ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ  ಕಲಂ 395, 365, 342 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!