Spread the love

ಪರ್ಕಳ: ದಿನಾಂಕ:29-02-2024(ಹಾಯ್ ಉಡುಪಿ ನ್ಯೂಸ್) ಲಯನ್ಸ್ ಕ್ಲಬ್ ಪರ್ಕಳ ಇವರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಉಡುಪಿಯ ಸಮಾಜ ಸೇವಕ ಸತೀಶ್ ಕಲ್ಮಾಡಿ ಯವರನ್ನು ಸನ್ಮಾನಿಸಲಾಯಿತು.

     ಮಲ್ಪೆ ಸುತ್ತಮುತ್ತಲಿನ  ಪರಿಸರ  ಹಾಗೂ ಉಡುಪಿ ನಗರದ ಸುತ್ತಮುತ್ತಲು ಎಲ್ಲಿಯಾದರೂ ಶವ ಸಂಸ್ಕಾರ ಕಾರ್ಯಕ್ಕೆ ಯಾರದಾದರೂ ಸಹಾಯ ಬೇಕೆಂದಾದಲ್ಲಿ ಕೇಳಿ ಬರುವ ಹೆಸರು ಸತೀಶ್ ಕಲ್ಮಾಡಿ ಯವರದ್ದು.

     ಕಳೆದ ಹಲವಾರು ವರ್ಷಗಳಿಂದ ಸಾವಿರಾರು ಶವಗಳಿಗೆ ಗೌರವಯುತ ಶವ ಸಂಸ್ಕಾರ ನಡೆಸಿ ಮುಕ್ತಿಯನ್ನು ದೊರಕಿಸಿ ಕೊಟ್ಟಿರುವ ಹೆಗ್ಗಳಿಕೆ ಇವರದು. ಯಾವುದೇ ಪ್ರಚಾರ ವಿಲ್ಲದೆ ಎಲೆ ಮರೆಯ ಕಾಯಿಯಂತೆ ನಿರಂತರವಾಗಿ ಸಮಾಜಕ್ಕೆ ತನ್ನದೇ ಆದ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

     ಕೊಳೆತ ಶವ ಇರಲಿ, ಸಾಂಕ್ರಾಮಿಕ ರೋಗದಿಂದ ನರಳಿರುವ ಯಾವುದೇ ತೆರನಾದ ಶವವಿರಲಿ, ಕುಟುಂಬಿಕರು ಶವ ಮುಟ್ಟಲು ಹಿಂಜರಿದರೂ ಕೂಡ ಸತೀಶ್ ಕಲ್ಮಾಡಿ ಯವರು ಅಂತಹ ಶವಗಳಿಗೂ ತಾನೋರ್ವನೆ ಸ್ನಾನ ಮಾಡಿಸಿ, ಬಟ್ಟೆ ತೊಡಿಸಿ ಹಿಂದೂ ಶಾಸ್ತ್ರಾನುಸಾರ ವಿಧಿ ವಿಧಾನಗಳನ್ನು ಪೂರೈಸಿ ರುದ್ರಭೂಮಿಗೆ ಕೊಂಡೊಯ್ದು ಮ್ರತ ಶರೀರಕ್ಕೆ ಗೌರವಯುತ ಅಂತಿಮ ಸಂಸ್ಕಾರ ವನ್ನು ನೆರವೇರಿಸುತ್ತಾರೆ. ವಿಶೇಷ ಎಂದರೆ ಇವರ ಈ  ಸೇವಾ ಕಾರ್ಯ ಉಚಿತ ಸೇವೆ ಯಾಗಿರುತ್ತದೆ. ಅಲ್ಲದೆ ಯಾವುದೇ ಪ್ರಚಾರವನ್ನು ಇವರು ಮಾಡಿಕೊಳ್ಳುವುದಿಲ್ಲ. ಇವರ ಶವ ಸಂಸ್ಕಾರದ ಸೇವಾ ಕಾರ್ಯವನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿವೆ.

     ಮಲ್ಪೆ,ಉಡುಪಿ ನಗರ ಹಾಗೂ ಸುತ್ತಮುತ್ತಲಿನ ಪರಿಸರದವರು ಶವ ಸಂಸ್ಕಾರ ದಂತಹ ಕಾರ್ಯವನ್ನು ನೆರವೇರಿಸಲು ಯಾರದ್ದಾದರೂ ಸಹಾಯ ಬೇಕೆಂದು ಕೊಂಡಲ್ಲಿ ಸತೀಶ್ ಕಲ್ಮಾಡಿ ಯವರನ್ನು ಸಂಪರ್ಕಿಸಬಹುದು .ಅವರ ಸೇವೆ ಉಚಿತವಾಗಿದ್ದು  ಶವ ಸಂಸ್ಕಾರದ ಕಾರ್ಯವನ್ನು ವಿಧಿವತ್ತಾಗಿ ನಡೆಸಿಕೊಡುತ್ತಾರೆ.

     ಸತೀಶ್ ಕಲ್ಮಾಡಿಯವರ ವಿಶೇಷ ಸೇವೆಯನ್ನು ಗುರುತಿಸಿ ಲಯನ್ಸ್ ಪರ್ಕಳ ಅವರು ತಮ್ಮ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಿದ್ದಾರೆ.

error: No Copying!