ಉಡುಪಿ: ದಿನಾಂಕ:25-02-2024(ಹಾಯ್ ಉಡುಪಿ ನ್ಯೂಸ್)
ಬ್ರಹ್ಮಾವರ ವೀರಾಂಜನೇಯ ದೇವಸ್ಥಾನದ ಬಳಿಯ ತರಕಾರಿ ಅಂಗಡಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿ ಹೋಗಿದ್ದಾರೆ ಎಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ರಹ್ಮಾವರ ಚಾಂತಾರ ಗ್ರಾಮದ ನಿವಾಸಿ ಸುಶಾಂತ್ (30) ಎಂಬವರು ವೀರಾಂಜನೇಯ ದೇವಾಸ್ಥಾನದ ಬಳಿ ಇರುವ ಹೋಲ್ ಸೇಲ್ ತರಕಾರಿ ಅಂಗಡಿಯ ಮಾಲಿಕರಾಗಿದ್ದು, ಅಂಗಡಿಯನ್ನು ಕೆವಿನ್ ಎಂಬಾತನು ನೋಡಿಕೊಳ್ಳುತ್ತಿದ್ದು, ದಿನಾಂಕ:24/02/2024 ರಂದು ರಾತ್ರಿ ಕೆಲಸವನ್ನು ಮುಗಿಸಿ ಮನೆಗೆ ಹೋಗಿದ್ದು, ದಿನಾಂಕ:25/02/2024 ರಂದು ಬೆಳಿಗ್ಗೆ ಅಂಗಡಿಗೆ ಬಂದು ನೋಡಿದಾಗ ಯಾರೋ ದುಷ್ಕರ್ಮಿಗಳು ಅಂಗಡಿಗೆ ಬೆಂಕಿ ಹಚ್ಚಿದ್ದು . ಅಂಗಡಿಯೆಲ್ಲಾ ಸುಟ್ಟು ಹೋಗಿ ಸುಮಾರು 50,000/- ರೂಪಾಯಿಗಳು ನಷ್ಟವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಸುಶಾಂತ್ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 435,427 ಐಪಿಸಿಯಂತೆ. ಪ್ರಕರಣ ದಾಖಲಾಗಿದೆ.