Spread the love
  • ಉಡುಪಿ: ದಿನಾಂಕ :26-02-2024(ಹಾಯ್ ಉಡುಪಿ ನ್ಯೂಸ್) ರಿಕ್ಷಾ ನಿಲ್ದಾಣದಲ್ಲಿ ರಿಕ್ಷಾ ನಿಲ್ಲಿಸುವ ವಿಚಾರದಲ್ಲಿ ರಿಕ್ಷಾ ಚಾಲಕರ ನಡುವೆ ಹೊಡೆದಾಟ ನಡೆದು ಉಡುಪಿ ನಗರ ಪೊಲೀಸ್ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ.
  • ಉಡುಪಿ,ಕುಕ್ಕಿಕಟ್ಟೆ ನಿವಾಸಿ ಶಿವಾನಂದ (47) ಎಂಬವರು ಆಟೋ ಚಾಲಕರಾಗಿದ್ದು ದಿನಾಂಕ 25/02/2024 ರಂದು ಬೆಳಿಗ್ಗೆ 04:00 ಗಂಟೆಗೆ ಉಡುಪಿ ತಾಲ್ಲೂಕು ಮೂಡನಿಡಂಬೂರು ಗ್ರಾಮದ ಹೊಸ ಕೆ.ಎಸ್.ಆರ್.ಟಿ.ಸಿ ಬಳಿಯ ಬನ್ನಂಜೆ ಆಟೋ ನಿಲ್ದಾಣದಲ್ಲಿ ತನ್ನ ಆಟೋ ವನ್ನು ಸರದಿ ಸಾಲಿನಲ್ಲಿ ಇಟ್ಟಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
  • ನಂತರ ಆರೋಪಿ ನಾರಾಯಣ ಎಂಬವರು ತನ್ನ ರಿಕ್ಷಾವನ್ನು ನಂತರದ ಸರತಿ ಸಾಲಿನಲ್ಲಿ ಇಟ್ಟು ಅವಾಚ್ಯ ಶಬ್ಧಗಳಿಂದ ಬೈದು , ಜೀವ ಬೆದರಿಕೆ ಹಾಕಿ, ಶಿವಾನಂದ ಅವರನ್ನು ಅಡ್ಡಗಟ್ಟಿ ರಿಕ್ಷಾದ ಕೀ ಯನ್ನು ತೆಗೆದು ಬಿಸಾಡಿ, ಕಬ್ಬಿಣದ ರಾಡ್ ನಿಂದ ಶಿವಾನಂದರ ಎಡಕಣ್ಣಿನ ಬದಿಗೆ ಹೊಡೆದು ನಂತರ ಬಂಡೆ ಕಲ್ಲಿನಿಂದ ಶಿವಾನಂದರ ಎಡಕೈ ಗೆ , ತಲೆಗೆ ಹಾಗೂ ಬೆನ್ನಿಗೆ ಹೊಡೆದಿದ್ದು ಅಲ್ಲೇ ಇದ್ದ ಇತರ 8 ಆಟೋ ರಿಕ್ಷಾ ಚಾಲಕರು ಶಿವಾನಂದರ ಕೈಯನ್ನು ಹಿಡಿದಿದ್ದ ಸಮಯ ಆರೋಪಿ ನಾರಾಯಣನು ಶಿವಾನಂದರ ಕಿಸೆಯಲ್ಲಿದ್ದ ಸಾಮ್ ಸ್ಯಾಂಗ್ ಮೊಬೈಲ್ ನ್ನು ಎಳೆದುಕೊಂಡಿದ್ದು , ಶಿವಾನಂದರು ಮೊಬೈಲ್ ಅನ್ನು ಕೊಡು ಎಂದು ಕೇಳಿದ್ದಕ್ಕೆನಾರಾಯಣನು ಕೊಡುವುದಿಲ್ಲ ಎಂದು ಹೇಳಿದ್ದು ಮತ್ತು  ಶಿವಾನಂದರ 20,000/- ರೂಪಾಯಿಯನ್ನು ಯಾರೋ ತೆಗೆದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  •      ಶಿವಾನಂದ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 143, 147, 148, 341, 323, 324, 504 , 506, 392 ಐಪಿಸಿಯಂತೆ ಪ್ರಕರಣ ದಾಖಲಾಗಿದೆ .
  • ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ನಾರಾಯಣ ಎಂಬವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.
  • ಉಡುಪಿ:  ಉಡುಪಿ ,ಚಿಟ್ಪಾಡಿ ನಿವಾಸಿ ನಾರಾಯಣ (45) ಎಂಬವರು ದಿನಾಂಕ :25/02/2024 ರಂದು ಬೆಳಿಗ್ಗೆ 4:00 ಗಂಟೆಗೆ ಉಡುಪಿ ತಾಲ್ಲೂಕು ಮೂಡನಿಡಂಬೂರು ಗ್ರಾಮದ ಹೊಸ ಕೆ.ಎಸ್.ಆರ್.ಟಿ.ಸಿ ಬಳಿ ಇರುವ ಬನ್ನಂಜೆ ಆಟೋ ನಿಲ್ದಾಣದಲ್ಲಿ ತನ್ನ ಆಟೋರಿಕ್ಷಾವನ್ನು ನಿಲ್ದಾಣದಲ್ಲಿ ನಿಲ್ಲಿಸಿದ್ದು, ಆರೋಪಿ ಶಿವಾನಂದ ಎಂಬವರು ಆಟೋವನ್ನು ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಲ್ಲಿಸಿದ್ದು, ಇದಕ್ಕೆ  ನಾರಾಯಣರವರು ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಒಂದು ನಿಲ್ದಾಣದಲ್ಲಿ 5 ಆಟೋ ಇರುವಾಗ 6 ನೇ ಆಟೋ ಇಡಬಾರದು ಎಂದು ಹೇಳಿದಕ್ಕೆ , ಆರೋಪಿ ಶಿವಾನಂದನು ನಾರಾಯಣರವರನ್ನು ಅಡ್ಡಗಟ್ಟಿ ಶರ್ಟ್ ಹರಿದು ಹಾಕಿ, ಕಲ್ಲು ಮತ್ತು ಮರದ ತುಂಡಿನಿಂದ ಎದೆಗೆ ಹೊಡೆದು ಹಲ್ಲೆ ಮಾಡಿದ್ದು, ಅವಾಚ್ಯ ಶಬ್ದಗಳಿಂದ ಬೈದು , ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  •      ನಾರಾಯಣರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ  ಕಲಂ: 341, 323, 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
error: No Copying!