Spread the love

ಹೆಬ್ರಿ: ದಿನಾಂಕ: 20-02-2024(ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ದೂರಿನ ಮೇರೆಗೆ ತನಿಖೆಗೆ ತೆರಳಿದ್ದ ಮಹಿಳಾ ಪೊಲೀಸ್‌ ಕಾನ್ಸ್ಟೇಬಲ್ ಮೇಲೆ ವ್ಯಕ್ತಿ ಯೋರ್ವ ಹಲ್ಲೆಗೆ ಯತ್ನಿಸಿದ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ದಿನಾಂಕ 18/02/2024 ರಂದು ಸಂಜೆ ಬೇಳಂಜೆ ಗ್ರಾಮದ ಮಹೇಶ ಎಂಬವರು 112 ಗೆ ಕರೆ ಮಾಡಿ ಬೇಳಂಜೆ ಕಮ್ತ ಹೊಸಮನೆ ನಿವಾಸಿ ರಾಜೇಶ ಎಂಬುವವರು ದರಲೆ ಕುತ್ರೆಗೆ ಬೆಂಕಿ ಹಾಕುತ್ತಿರುವುದಾಗಿ ತಿಳಿಸಿದ ಮೇರೆಗೆ  ಕರ್ತವ್ಯದಲ್ಲಿದ್ದ ಮಹಿಳಾ ಹೆಡ್ ಕಾನ್ಸ್ಟೇಬಲ್ ರಶ್ಮೀ  ರವರು ದೂರು ಬಂದ ಸ್ಥಳಕ್ಕೆ ಹೋಗಿ ಘಟನೆಯ ಬಗ್ಗೆ ಅಲ್ಲಿ ಬೆಂಕಿ ಹಾಕಿದ್ದ ರಾಜೇಶ ರವರಲ್ಲಿ ವಿಚಾರಿಸಿದಾಗ ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈದು , ಕಟ್ಟಿಗೆಯಲ್ಲಿ ಹೊಡೆದಲ್ಲಿ ಮರಣ ಸಂಭವಿಸುವ ಸಾಧ್ಯತೆ ಇದೆಯೆಂದು ಗೊತ್ತಿದ್ದು ಕೂಡಾ ಏಕಾಏಕಿ ಕಟ್ಟಿಗೆ ತೆಗೆದುಕೊಂಡು ರಶ್ಮೀ ರವರಿಗೆ ಹಾಗೂ ಚಾಲಕ ಆನಂದ ರವರಿಗೆ ಜೀವ ಬೆದರಿಕೆ ಹಾಕಿ ಹೊಡೆಯಲು ಹೋಗಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾನೆ ಎಂದು ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ  ಕಲಂ: 353, 308, 504, 506, 509 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!