Spread the love

ಉಡುಪಿ: ದಿನಾಂಕ: 20-02-2024(ಹಾಯ್ ಉಡುಪಿ ನ್ಯೂಸ್)  ನಗರದ ಬಂಗಾರದ ಅಂಗಡಿ ಮಾಲಕರೋರ್ವರಿಗೆ ಗಿರಾಕಿಗಳ ಸೋಗಿನಲ್ಲಿ ಬಂದ ಮಹಿಳೆಯರು ವಂಚಿಸಿರುವ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

    ಉಡುಪಿ , ಶಿವಳ್ಳಿ ಗ್ರಾಮದ ನಿವಾಸಿ ನಿತ್ಯಾನಂದ (58)  ಎಂಬವರು ಉಡುಪಿ ಕನಕದಾಸ ರಸ್ತೆಯಲ್ಲಿ ಮಾರುತಿ ಜುವೆಲ್ಲರಿ ಶಾಪ್ ಅನ್ನು ಹೊಂದಿದ್ದಾರೆ ಎನ್ನಲಾಗಿದೆ.

      ದಿನಾಂಕ 18/02/2024 ರಂದು ಸಂಜೆ ಹೊತ್ತು ಅಂದಾಜು 35 ರಿಂದ 45 ವರ್ಷ ಪ್ರಾಯದ ಮೂವರು ಬುರ್ಖಾ ದಾರಿ ಮಹಿಳೆಯರು ಗ್ರಾಹಕರಂತೆ ಅಂಗಡಿಗೆ ಬಂದು 15,.800 ಗ್ರಾಂ ತೂಕದ ಒಂದು ಚಿನ್ನದ ಚೈನ್ ಮತ್ತು 10.150 ಗ್ರಾಂ ತೂಕದ ಚಿನ್ನದ ಬ್ರೆಸ್ ಲೆಟ್ ಖರೀದಿಸಿದ್ದು, ಇದಕ್ಕೆ ಬದಲಾಗಿ ಆರೋಪಿತೆಯರು ತಮ್ಮ ಬಳಿ ಇದ್ದ ಹಳೆಯ 31.490 ಗ್ರಾಂ ತೂಕದ ಒಂದು ನೆಕ್ಲೇಸ್ ಮತ್ತು 10.940 ಗ್ರಾಂ ತೂಕದ ಬೆಂಡೋಲೆಗೆ ಹಾಕುವ ಜುಮುಕಿ ನೀಡಿ  ನಿತ್ಯಾನಂದ ಅವರಿಂದ 48,771/- ರೂಪಾಯಿ ಉಳಿಕೆ ಹಣದ ಪೈಕಿ 19,000/- ರೂಪಾಯಿಯನ್ನು ನಗದಾಗಿ ಪಡೆದು ಕೊಂಡು ಅಂಗಡಿಯಿಂದ ಹೊರ ಹೋಗಿದ್ದರು ಎಂದಿದ್ದಾರೆ.

     ಮಹಿಳೆಯರು ವ್ಯವಹಾರದ ಸಮಯ ಚೌಕಾಸಿಯನ್ನು ಮಾಡುವ ವೇಳೆ  ನಿತ್ಯಾನಂದರ ಗಮನವನ್ನು ಬೇರೆಡೆಗೆ ಸೆಳೆದು ಆರೋಪಿತೆಯರು ಪರೀಕ್ಷೆಯ ಸಮಯ ನೀಡಿದ್ದ ಅಸಲಿ ಚಿನ್ನದ ಬದಲಾಗಿ ಆಭರಣಗಳನ್ನು ಹೋಲುವ ನಕಲಿ ಚಿನ್ನದ ಆಭರಣಗಳನ್ನು ನಿತ್ಯಾನಂದರಿಗೆ ನೀಡಿ ವಂಚನೆ ಹಾಗೂ ಮೋಸ ಮಾಡಿ ಒಟ್ಟು 1,98,923/- ಮೌಲ್ಯದ ಅಸಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿರುತ್ತಾರೆ ಎಂದು ನಿತ್ಯಾನಂದರವರು ಪೊಲೀಸರಿಗೆ ದೂರು ನೀಡಿದ್ದಾರೆ.

     ನಿತ್ಯಾನಂದ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 417, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!