Spread the love

ಉಡುಪಿ: ದಿನಾಂಕ :21-02-2024(ಹಾಯ್ ಉಡುಪಿ ನ್ಯೂಸ್) ಪರ್ಯಾಯ ಪುತ್ತಿಗೆ ಮಠದ ಶ್ರೀ ಗಳ ಕೋರಿಕೆಯಂತೆ ಗೂಗಲ್ ಸಂಸ್ಥೆಯವರು.  ಉಡುಪಿ ಶ್ರೀಕೃಷ್ಣ ಮಠದ ಲೊಕೇಶನ್ ನಲ್ಲಿ ಮಾರ್ಪಾಡು ಮಾಡಿದ್ದಾರೆ ಎಂದು ಕರವೇ ಜಿಲ್ಲಾಧ್ಯಕ್ಷ ಸುಜಯ ಪೂಜಾರಿ ತಿಳಿಸಿದ್ದಾರೆ.
     ಕಳೆದ‌ ಎರಡು-ಮೂರು‌ವರ್ಷಗಳಿಂದ ಗೂಗಲ್ ನಲ್ಲಿ ಶ್ರೀ ಕೃಷ್ಣ ಮಠ ಎಂದು ಮ್ಯಾಪ್ ಸರ್ಚ್ ಮಾಡಿದರೆ ಅದು ಅಜ್ಜರಕಾಡು , ಕಾಡುಬೆಟ್ಟು,ವುಡ್ ಲ್ಯಾಂಡ್ ಹೋಟೆಲ್ ರಸ್ತೆ, ಬಡಗು ಪೇಟೆ ,ಶಿರೂರು ಮಠದ ರಸ್ತೆ, ತೆಂಕು ಪೇಟೆ ರಸ್ತೆ ಮುಂತಾದ ಅಗಲ ಕಿರಿದಾದ ಸಮೀಪದ ರಸ್ತೆಗಳನ್ನು ತೋರಿಸುವುದರಿಂದ ವಾಹನಗಳಲ್ಲಿ ಬರುವ ಪ್ರವಾಸಿಗರಿಗೆ ಸಮಸ್ಯೆ ಯಾಗುತ್ತಿತ್ತು.ಅಲ್ಲದೆ ದಾರಿ ತಪ್ಪಿ ಬರುವ ವಾಹನಗಳಿಂದಾಗಿ ಸ್ಥಳೀಯರಿಗೆ ಬಹಳಷ್ಟು ತೊಂದರೆಯಾಗುತ್ತಿತ್ತು.

ಈ ಸಮಸ್ಯೆಯ ಪರಿಹಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಟಿ. ಎ ನಾರಾಯಣ ಗೌಡರ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರ ನೇತೃದಲ್ಲಿ ಪುತ್ತಿಗೆ ಮಠದ ಶ್ರೀಗಳಿಗೆ ಜಿಲ್ಲಾ ಪದಾಧಿಕಾರಿಗಳು ಹಾಗೂ ತಾಲೂಕು ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರುಗಳು ಸೇರಿ ಸ್ವಾಮೀಜಿಗಳಿಗೆ ಮನವಿ ನೀಡಿದ್ದರು ಎನ್ನಲಾಗಿದೆ. ಆ ಮನವಿಗೆ ಸ್ಪಂದಿಸಿದ ಸ್ವಾಮೀಜಿಗಳು ಗೂಗಲ್ ಸಂಸ್ಥೆಯವರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಈಗ ಗೂಗಲ್ ಸಂಸ್ಥೆಯವರು ಲೊಕೇಶನ್ ನಲ್ಲಿ ಮಾರ್ಪಾಡು ಮಾಡಿರುವುದರಿಂದ  ಸಮಸ್ಯೆ ಬಗೆಹರಿದಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಸುಜಯ ಪೂಜಾರಿ ತಿಳಿಸಿದ್ದಾರೆ.

     ಇನ್ನಾದರೂ ಪ್ರವಾಸಿ ವಾಹನಗಳ ಸರಿಯಾದ  ಸಂಚಾರದಿಂದ ನಗರದ ವಾಹನದಟ್ಟಣೆ
ಕಡಿಮೆಯಾಗುವುದೆನ್ನುವ ನಿರೀಕ್ಷೆ  ಮಾಡಲಾಗಿದೆ.

     ಕರ್ನಾಟಕ ರಕ್ಷಣಾ ವೇದಿಕೆಯ ಗೂಗಲ್ ಮ್ಯಾಪ್ ಸರಿಪಡಿಸ ಬೇಕೆಂಬ ಮನವಿಗೆ ಸ್ಪಂದಿಸಿದ ಪುತ್ತಿಗೆ ಸ್ವಾಮೀಜಿಯವರಿಗೆ ಅಭಿನಂದನೆಗಳು. ಎಂದು ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

error: No Copying!