Spread the love

ಹೆಬ್ರಿ: ದಿನಾಂಕ:13-02-2024(ಹಾಯ್ ಉಡುಪಿ ನ್ಯೂಸ್) ಚಾರ ಗ್ರಾಮ ಪಂಚಾಯತ್ ನ ಕಿಟಕಿಯ ಗ್ಲಾಸ್ ಗಳಿಗೆ ವ್ಯಕ್ತಿ ಯೋರ್ವ ಹಾನಿ ಎಸಗಿದ್ದಾನೆ ಎಂದು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ದಿನಾಂಕ: 27/01/2024 ರಂದು ರಾತ್ರಿ ಮತ್ತು ದಿನಾಂಕ: 10/02/2024 ರಂದು ರಾತ್ರಿ ಸಮಯ ಹೆಬ್ರಿ ತಾಲೂಕು,ಚಾರ ಗ್ರಾಮದ ನಿವಾಸಿ ಉದಯ ಎಂಬಾತನು ಹೆಬ್ರಿ ತಾಲೂಕು ಚಾರ ಗ್ರಾಮ ಪಂಚಾಯತ್ ಕಛೇರಿಯ ಆವರಣಕ್ಕೆ ಯಾವುದೋ ಮೋಟಾರ್ ಸೈಕಲ್ ನಲ್ಲಿ ಬಂದು ಸಾರ್ವಜನಿಕ ಸೊತ್ತು ಆದ ಗ್ರಾಮ ಪಂಚಾಯತ್ ಕಛೇರಿಯ ಎದುರಿನ ಎರಡು ಗ್ಲಾಸ್ ಗಳನ್ನು ಒಡೆದು ಹಾಕಿ ಸುಮಾರು 5000/- ರೂಪಾಯಿ ನಷ್ಟ ಉಂಟು ಮಾಡಿರುತ್ತಾನೆ ಎನ್ನಲಾಗಿದೆ.

 ಈ ಬಗ್ಗೆ ಚಾರ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಯವರಾದ ಶ್ರೀ ಮತಿ ಸುರೇಖಾ ಅವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ US 427 IPC & 3(2)(A) PREV OF DAMAGE TO PUBLIC PROPERTY ACT ನಂತೆ  ಪ್ರಕರಣ ದಾಖಲಾಗಿದೆ .

error: No Copying!