
ಉಡುಪಿ: ದಿನಾಂಕ:13-02-2024(ಹಾಯ್ ಉಡುಪಿ ನ್ಯೂಸ್) ಟಿ.ಎ.ನಾರಾಯಣಗೌಡರ ನಾಯಕತ್ವದ ಕರವೇ ಉಡುಪಿ ಜಿಲ್ಲಾ ಘಟಕದಿಂದ ಇಂದು 13-02-2024 ರಂದು ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ,ಪರ್ಯಾಯ ಶ್ರೀ ಕೃಷ್ಣ ಮಠ ಉಡುಪಿ ಅವರಿಗೆ ಮನವಿ ಸಲ್ಲಿಸಲಾಯಿತು.
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಿದ್ದಾರೆ. ಪ್ರವಾಸಿಗರು ವಾಹನಗಳ ಮೂಲಕ ಬರುತ್ತಿದ್ದಾರೆ. ಅವರಿಗೆ ನೇರವಾಗಿ ಕೃಷ್ಣಮಠಕ್ಕೆ ಬರಲು ಅನುಕೂಲವಾಗುವಂತೆ ಗೂಗಲ್ ನಕ್ಷೆಯಲ್ಲಿ ಸರಿಯಾದ ದಾರಿ ತೋರಿಸುವಂತೆ ವ್ಯವಸ್ಥೆ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ. ಅಲ್ಲದೆ ಕೃಷ್ಣಮಠಕ್ಕೆ ಕರ್ನಾಟಕದಾದ್ಯಂತದಿಂದ ಭಕ್ತರು ಬರುತ್ತಿದ್ದು. ಅವರಿಗೆ ಕನ್ನಡದಲ್ಲಿಯೇ ಉಡುಪಿ ನಗರದಲ್ಲಿ ಸೂಚನಾ ಫಲಕ ಅಳವಡಿಸಬೇಕಾಗಿ ಈ ಮೂಲಕ ಪ್ರಾರ್ಥಿಸಿಕೊಳ್ಳುತ್ತೇವೆ ಎಂದು ಮನವಿ ಸಲ್ಲಿಸಲಾಯಿತು.
ಕರವೇ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ.ಜಿಲ್ಲಾ ಗೌರವಾಧ್ಯಕ್ಷರಾದ ಸುಂದರ. ಎ ಬಂಗೇರ. ಜಿಲ್ಲಾ ಮಹಿಳಾ ಅಧ್ಯಕ್ಷರಾದ ಗೀತಾ ಪಾಂಗಾಳ, ಜಿಲ್ಲಾ ಉಪಾಧ್ಯಕ್ಷರಾದ ಸಂತೋಷ್ ಕುಲಾಲ್. ಜಿಲ್ಲಾ ಕಾರ್ಯದರ್ಶಿ ಸಿದ್ದಣ್ಣ ಎಸ್ ಪೂಜಾರಿ. ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಕೆ. ಜಿಲ್ಲಾ ಸಂಘಟನಾ ಸಹ ಕಾರ್ಯದರ್ಶಿ ಗೋಪಾಲ್. ಜಿಲ್ಲಾ ಸದಸ್ಯರು ಅಶೋಕ್. ಜಿಲ್ಲಾ ಮಹಿಳಾ ಉಪಾಧ್ಯಕ್ಷರಾದ ದೇವಕಿ ಬಾರ್ಕೂರು.ಜಿಲ್ಲಾ ಮಹಿಳಾ ಉಪಾಧ್ಯಕ್ಷರು ಶಾಲಿನಿ ಸುರೇಂದ್ರ. ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಜ್ಯೋತಿ. ಜಿಲ್ಲಾ ಮಹಿಳಾ ಕಾರ್ಯದರ್ಶಿ ಚಂದ್ರಕಲಾ. ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿ ಜ್ಯೋತಿ ಆರ್. ಕಾಪು ಮಹಿಳಾ ಅಧ್ಯಕ್ಷರಾದ ಶಶಿಕಲನವೀನ. ಉಡುಪಿ ಮಹಿಳಾ ತಾಲೂಕು ಅಧ್ಯಕ್ಷರಾದ ಹೆಲನ್ ಸೋನ್ಸ್. ಕಾಪು ಮಹಿಳಾ ಉಪಾಧ್ಯಕ್ಷರಾದ ಶಾಲಿನಿ ಸುರೇಶ . ಉಡುಪಿ ಉಪಾಧ್ಯಕ್ಷರಾದ ಮಹಿಳಾ ಪವಿತ್ರ ಶೆಟ್ಟಿ. ಉಡುಪಿ ಪುರುಷ ಮತ್ತು ಮಹಿಳಾ ಜಿಲ್ಲಾ ಮತ್ತು ತಾಲೂಕು ಸರ್ವ ಸದಸ್ಯರು ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.